ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಸಮಾಜದಿಂದ ನಿರ್ಗತಿಕರಿಗೆ ಊಟ, ಬಟ್ಟೆ ದಾನ

Last Updated 14 ಆಗಸ್ಟ್ 2021, 5:30 IST
ಅಕ್ಷರ ಗಾತ್ರ

ದಾವಣಗೆರೆ:ಜೈನ ಧರ್ಮದ 22ನೇ ತೀರ್ಥಂಕರರಾದ ಭಗವಾನ್ ನೇಮಿನಾಥ್ ಅವರ ದೀಕ್ಷೆ ದಿನದ ಅಂಗವಾಗಿ 70 ನಿರ್ಗತಿಕರಿಗೆ ಊಟ, ವಸ್ತ್ರಗಳನ್ನು ನೀಡಲಾಯಿತು.

ಇಲ್ಲಿನ ಜೈನ್ ಬಜಾಜ್ ಶೋ ರೂಂ ಎದುರಿನ ಜೈನ್ ದಾದವಾಡಿಗೆ ಬೀದಿ ಬದಿಯಲ್ಲಿದ್ದ ನಿರ್ಗತಿಕರನ್ನು ಕರೆತಂದಜೈನ್ ಯೂತ್ಸ್‌ ಆಫ್ ದಾವಣಗೆರೆಯ ಸದಸ್ಯರು ಅವರಿಗೆ ಕ್ಷೌರ ಮಾಡಿ ಹಾಗೂ ಶೇವಿಂಗ್ ಮಾಡಿಸಿ, ಹೊಸ ಬಟ್ಟೆಗಳನ್ನು ತೊಡಿಸಿ, ಶೂಗಳನ್ನು ನೀಡಿದರು. ಇದರ ಜೊತೆಗೆ ಊಟವನ್ನು ಬಡಿಸಿದರು.

ಆಚಾರ್ಯ ಅಭಯ್ ಶೇಖರ್ ವಿಜಯ್ ಜೀ ಮಹಾರಾಜ್ ಅವರ ಆಶೀರ್ವಾದ ಹಾಗೂ ಸುಪಾರ್ಶ್ವನಾಥ ಶ್ವೇತಾಂಬರ ಜೈನ್ ಮೂರ್ತಿಪೂಜಕ ಸಂಘದ ಸಹಕಾರದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸುಪಾರ್ಶ್ವನಾಥ ಜೈನ ಶ್ವೇತಾಂಬರ ಮೂರ್ತಿಪೂಜಕ ಸಂಘದ ಅಧ್ಯಕ್ಷ ಛಗನ್‌ಲಾಲ್ ಜೈನ್, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್ ಜೈನ್, ಜೈನ ಸಮಾಜದ ಮುಖಂಡರಾದ ಜಯಚಂದ್ ಜೈನ್, ಕಿಶೋರ್ ಜೈನ, ಶ್ರೇಣಿಕ್ ಜೈನ್, ಸಾವನ್ ಜೈನ್, ಜೈನ್ ಯೂತ್ಸ್‌ ಆಫ್ ದಾವಣಗೆರೆ ತಂಡದ ರೋಣಕ್, ನಹುಶ್, ಹನುಶ್, ಆಯೂಷ್, ಅಭಿಷೇಕ, ಶೋನಿತ್, ಪ್ರದೀಪ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT