ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿದಾರರಿಗೆ ಮೊಟ್ಟೆ ಬೆಲೆ ಏರಿಕೆ ಬಿಸಿ

ಫೀಡ್ ಬೆಲೆ ಹೆಚ್ಚಳ: ರೈತರು ಕಂಗಾಲು
Last Updated 9 ಡಿಸೆಂಬರ್ 2019, 9:34 IST
ಅಕ್ಷರ ಗಾತ್ರ

ದಾವಣಗೆರೆ: ಮಾರುಕಟ್ಟೆಯಲ್ಲಿ ಕಳೆದ ತಿಂಗಳು ₹ 4ರಿಂದ ₹ 4.50ಕ್ಕೆ ಮಾರಾಟವಾಗುತ್ತಿದ್ದ ಒಂದು ಮೊಟ್ಟೆಯು ಡಿಸೆಂಬರ್‌ನಲ್ಲಿ ಏಕಾಏಕಿ ₹ 5ರಿಂದ ₹ 6ಕ್ಕೆ ಏರಿಕೆಯಾಗುವ ಮೂಲಕ ಖರೀದಿದಾರನಿಗೆ ಬಿಸಿ ಮುಟ್ಟಿಸಿದೆ. ಹೀಗಾಗಿ ನಾನ್‌ವೆಜ್ ಪ್ರಿಯರಿಗೆ ನಿರಾಶೆಯಾಗಿದೆ.

ಚಳಿಗಾಲದ ಸಮಯವಾಗಿರುವುದರಿಂದ ಮೊಟ್ಟೆ ಬಳಕೆ ತುಸು ಹೆಚ್ಚಿರುತ್ತದೆ. ಅಲ್ಲದೇ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಗಳ ಆಚರಣೆಗೆ ಕೇಕ್‌ಗಳ ತಯಾರಿಕೆಗಾಗಿ ಮೊಟ್ಟೆಗಳು ರವಾನೆಯಾಗುತ್ತಿವೆ. ಇದರಿಂದಾಗಿ ಬೇಡಿಕೆ ಹೆಚ್ಚಾಗಿದ್ದು, ಮೊಟ್ಟೆಗಳ ಬೆಲೆಯಲ್ಲಿ ಏರಿಕೆಯಾಗಿದೆ. ಗ್ರಾಹಕನಿಗೆ ಹೊರೆಯಾಗಿದೆ.

‘ರಿಟೇಲ್‌ದಾರರಿಗೆ ಕಡಿಮೆ ಬೆಲೆ ಇದೆ. ಆದರೆ ಮಾರಾಟಗಾರರು ನಮ್ಮಿಂದ ಕಡಿಮೆ ಬೆಲೆಗೆ ತೆಗೆದುಕೊಂಡು ಜಾಸ್ತಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನಾವು ₹4.20ಕ್ಕೆ ಒಂದು ಮೊಟ್ಟೆ ನೀಡುತ್ತೇವೆ. ಆದರೆ ಖರೀದಿದಾರರು ಒಂದು ಮೊಟ್ಟೆಗೆ ₹6ರಂತೆ ಮಾರಾಟ ಮಾಡುತ್ತಿದ್ದಾರೆ’ ಎಂಬುದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ವರ್ ರೆಡ್ಡಿ ಅವರು ನೀಡುವ ಮಾಹಿತಿ.

  • 25 ಲಕ್ಷಮೊಟ್ಟೆಗಳು ಪ್ರತಿದಿನ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತವೆ
  • 20 ಲಕ್ಷಬೇರೆ ಕಡೆಗೆ ಸಾಗಣೆಯಾಗುತ್ತವೆ.
  • 5 ಲಕ್ಷಮೊಟ್ಟೆಗಳು ನಗರದಲ್ಲಿ ಬಳಕೆಯಾಗುತ್ತವೆ
  • 1,200ಕೋಳಿಫಾರಂಗಳು ಜಿಲ್ಲೆಯಲ್ಲಿವೆ

ಕಳೆದ ತಿಂಗಳು 100 ಮೊಟ್ಟೆಗೆ ₹320 ಬೆಲೆ ಇತ್ತು. ಆದರೆ ಈ ತಿಂಗಳು ₹470 ಆಗಿದೆ. ಬೆಲೆ ಜಾಸ್ತಿಯಾದರೂ ಅನಿವಾರ್ಯವಾಗಿ ಕೊಂಡುಕೊಳ್ಳಬೇಕಾಗಿದೆ.ಮೊಟ್ಟೆಯ ಬೆಲೆ ಏರಿಕೆಯಾಗಿದೆ. ಅದರ ಜೊತೆಗೆ ಈರುಳ್ಳಿಯ ಬೆಲೆಯೂ ಹೆಚ್ಚಾಗಿರುವುದರಿಂದ ತುಂಬಾ ತೊಂದರೆಯಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂಬುದು ನಮ್ಮ ಉದ್ದೇಶ.
- ಬೀದಿ ಬದಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT