ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಕ್ಸೂಚಿಯಾಗಲಿದೆ ವಿಧಾನಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನಕುಮಾರ್

Last Updated 6 ಡಿಸೆಂಬರ್ 2021, 5:41 IST
ಅಕ್ಷರ ಗಾತ್ರ

ಸಂತೇಬೆನ್ನೂರು:‘2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ. ಈ ವಿಧಾನಪರಿಷತ್ ಚುನಾವಣೆ ಅದಕ್ಕೆ ದಿಕ್ಸೂಚಿ ಆಗಲಿದೆ’ಎಂದು ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಆರ್‌. ಪ್ರಸನ್ನಕುಮಾರ್ ಹೇಳಿದರು.

ಭಾನುವಾರ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಪಕ್ಷ ಎರಡನೇ ಬಾರಿ ಸ್ಪರ್ಧಿಸಲು ಅವಕಾಶ ನೀಡಿದೆ. ಜನರ ದನಿಯಾಗಿ ಕೆಲಸ ಮಾಡು‌ವೆ. ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸಿದೆ. ಇಲ್ಲಿಯವರೆಗೆ ಬಡವರಿಗೆ ಮನೆ ಕೊಟ್ಟಿಲ್ಲ. ಸೋಲಾರ ಘಟಕಗಳಿಗೆ ₹ 4.85 ಲಕ್ಷ ಬೆಲೆ ವಿಧಿಸಲಾಗುತ್ತಿದೆ. ಅದರ ನೈಜ ಬೆಲೆ ₹ 2.50 ಲಕ್ಷ’ ಎಂದು ದೂರಿದರು.

ಮಾಜಿ ಶಾಸಕ ವಡ್ನಾಳ್ ರಾಜಣ್ಣ, ‘ಗ್ರಾಮ ಪಂಚಾಯಿತಿ ಸದಸ್ಯರು ಬರೀ ನೀರು ಬಿಡೋಕೆ, ಲೈಟ್ ಹಾಕೋಕೆ ಅಷ್ಟೇ ಎಂಬಂತಾಗಿದೆ. ಒಂದು ವರ್ಷದಿಂದ ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೀಡಿಲ್ಲ’ ಎಂದು ದೂರಿದರು.

ಮುಖಂಡ ಹೊದಿಗೆರೆ ರಮೇಶ್, ‘ಕಾಂಗ್ರೆಸ್ ಎಲ್ಲಾ ಸಮುದಾಯ ಒಟ್ಟಿಗೆ ಒಯ್ಯುವ ಪಕ್ಷ. ಲಾಭಕ್ಕಾಗಿ ಕಾಮಗಾರಿ ಮಾಡುವುದಲ್ಲ. ಅಭಿವೃದ್ಧಿಗಾಗಿ ಕಾಮಗಾರಿ ನಡೆಸಿ. ಹಿಂಬಾಗಿಲ ರಾಜಕಾರಣ ಬೇಡ’ ಎಂದು ಕುಟುಕಿದರು.

ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವೀರೇಶ್ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಎಂ. ಸಿದ್ದಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜೆ.ರಂಗನಾಥ್, ನಂಜಾನಾಯ್ಕ್, ಜಗದೀಶ್, ಸಿ. ನಾಗರಾಜ್, ಜಿ.ಎಸ್. ಶಿವರಾಜ್, ಆಸೀಫ್, ರಹಮತ್‌ ಉಲ್ಲಾ, ಜಬೀವುಲ್ಲಾ, ಯೋಗೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT