ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಶನಿವಾರ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ಕಟಾವಿಗೆ ಬಂದ ಆರು ಎಕರೆ ಮೆಕ್ಕೆಜೋಳ ಸುಟ್ಟು ಭಸ್ಮವಾಗಿದ್ದು, ಅಪಾರ ಹಾನಿಯಾಗಿದೆ.

ಎನ್.ಎಸ್.ಸೋಮನಗೌಡ ಎಂಬ ರೈತ ಬೇರೊಬ್ಬ ರೈತರ ಜಮೀನನ್ನು ಗುತ್ತಿಗೆ ಪಡೆದು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಕೂಲಿ ಕಾರ್ಮಿಕರು ಸಿಗದೇ ತಡವಾಗಿದ್ದ ಕಾರಣ ಕಟಾವು ವಿಳಂಭವಾಗಿತ್ತು. ಜಮೀನಿನಲ್ಲಿ ವಿದ್ಯುತ್ ಕಂಬಗಳು ಹಾದು ಹೋಗಿದ್ದು ಅಲ್ಲಲ್ಲಿ ಕೆಳಗೆ ಜೋತು ಬಿದ್ದಿದ್ದು ಜೋರಾಗಿ ಗಳಿ ಬೀಸಿದಾಗ ಒಂದಕ್ಕೊಂದು ವಿದ್ಯುತ್ ತಂತಿಗಳು ತಾಗಿ ಹೊತ್ತಿದ ಬೆಂಕಿ ಕಿಡಿ ಒಣಗಿದ ಮೆಕ್ಕೆಜೋಳದ ದಂಟುಗಳೊಗೆ ತಗುಲಿ ಬೆಂಕಿಯ ಜ್ವಾಲೆ ಹರಡಿದೆ. ಇದರಿಂದಾಗಿ ಕಟಾವಿಗೆ ಬಂದ ಆರು ಎಕರೆ ತನೆಗಳು ಸುಟ್ಟು ಕರಕಲಾಗಿವೆ. ಅಂದಾಜು ರೂ. 4.5 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ರೈತ ಎನ್.ಎಸ್.ಸೋಮನಗೌಡ ಪೊಲೀಸರಿಗೆ ದೂರು ನೀಡಿದ್ದಾರೆ.

ಅಗ್ನಿಶಾಮಕ ತುರ್ತು ಸೇವಾ ಸಿಬ್ಬಂದಿ ಬಂದು ಅಗ್ನಿ ನಂದಿಸುವಷ್ಟರಲ್ಲಿ ಗ್ರಾಮಸ್ಥರು ಟ್ರ್ಯಾಕ್ಟರ್ ಮೂಲಕ ನೀರು ತಂದು ಸುರಿದು, ಹಸಿ ಸೊಪ್ಪು ಮೂಲಕ ಬೆಂಕಿ ನಂದಿಸಿದ್ದಾರೆ.

ಜಗಳೂರು ತಾಲ್ಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಜಮೀನಿನಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ಮೆಕ್ಕೆಜೋಳ ಹೊಲ ಬೆಂಕಿಗೆ ಆಹುತಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.