ನ್ಯಾಮತಿ: ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಕಲೆ ಭಜನೆಯನ್ನು ಪೋಷಿಸಲಾಗುತ್ತಿದೆ ಎಂದು ಸಾಲಬಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಮಲ್ಲಿಕಾರ್ಜುನ ತಿಳಿಸಿದರು.

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಶನಿವಾರ ನಡೆದ 10ನೇ ತಿಂಗಳ ಸಾಹಿತ್ಯ ಸೌರಭ ಮಾಸಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೊಬೈಲ್ ಯುಗದಲ್ಲಿ ಭಜನೆ ಮರೆಯಾಗುತ್ತಿದೆ. ನಗರ ಪ್ರದೇಶದ ಮಕ್ಕಳಿಗೆ ಸಾಮೂಹಿಕ ಭಜನೆಯ ಅರಿವು ಇಲ್ಲ. ಭಜನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುವ ಜೊತೆಗೆ ಪರಸ್ಪರ ಸಹಕಾರ ಮನೋಭಾವ ಬೆಳೆಯುತ್ತದೆ ಎಂದರು.

ಪುಷ್ಪಗಿರಿ ಮಹಾಸಂಸ್ಥಾನ ವತಿಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸ್ವಸಹಾಯ ಸಂಘಗಳನ್ನು ರಚನೆ ಮಾಡುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಡಲಾಗುತ್ತಿದೆ. ಆಸಕ್ತರು ಮಹಿಳಾ ಸಂಘಗಳ ರಚನೆಗೆ ಆಸಕ್ತಿ ತೋರಿದರೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ನಿವೃತ್ತ ಶಿಕ್ಷಕ ಮಂಜಪ್ಪ ಮತ್ತು ಸಮನ್ವಯಾಧಿಕಾರಿ ವೀರಣ್ಣಗೌಡ ಹೇಳಿದರು

ಕನ್ನಡ ಸಾಹಿತ್ಯ ಪರಿಷತ್ ನ್ಯಾಮತಿ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಯರಗನಾಳ್ ಗ್ರಾಮದ ವೀರಭದ್ರೇಶ್ವರ ಪುಷ್ಪಗಿರಿ ಮಹಿಳಾ ಭಜನಾ ತಂಡದವರು ಭಜನಾ ಗೀತೆಗಳನ್ನು ಹಾಡಿದರು.

ಅಂಬಿಕಾ, ಸುಮಲತಾ, ಉಮಾದೇವಿ, ರೇಖಾ, ಪುಷ್ಪಾ, ಸಂಡೂರು ಮಹೇಶ್ವರಪ್ಪ, ಬೆಳಗುತ್ತಿ ರೇವಣಸಿದ್ದಪ್ಪ, ಪಾಲಾಕ್ಷಪ್ಪ, ಕುಮಾರಿ ಮೈತ್ರಿ ಹಾಜರಿದ್ದರು.

ನಿಕಟಪೂರ್ವ ಅಧ್ಯಕ್ಷ ಗಡೆಕಟ್ಟೆ ನಿಜಲಿಂಗಪ್ಪ, ಸೈಯದ್ ಅಪ್ಸರ್ ಪಾಷಾ, ಶಿಕ್ಷಕರಾದ ತಿಪ್ಪೇಸ್ವಾಮಿ ಆಚೆಮನೆ, ಉಮೇಶ, ಜಿ.ಮಮತಾ, ಎಸ್.ಜಿ.ಬಸವರಾಜಪ್ಪ, ರಾಮೇಶ್ವರ ನಾಗರಾಜ, ಎಂ.ಎಸ್.ಜಗದೀಶ, ಕದಳಿ ಸಂಘದ ಅಧ್ಯಕ್ಷೆ ಅಂಬಿಕಾ ಬಿದರಗಡ್ಡೆ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ಬೋಜರಾಜ, ಎಚ್.ಶಿವಾನಂದಪ್ಪ, ಉಷಾ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.