ಸಂತೇಬೆನ್ನೂರು: ಸಮೀಪದ ಹಿರೇಕೋಗಲೂರಿನ ಕ್ರೇಜಿ ಸ್ಟಾರ್ ಹಿಂದೂ– ಮುಸ್ಲಿಂ ಯುವಕ ಸಂಘದ ವತಿಯಿಂದ ಗ್ರಾಮದ ಜಾಮಿಯಾ ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
‘18 ವರ್ಷಗಳಿಂದ ಹಿಂದೂ– ಮುಸ್ಲಿಂ ಯುವಕರು ಒಗ್ಗೂಡಿ ಗಣೇಶ ಉತ್ಸವ ನಡೆಸಿಕೊಂಡು ಬಂದಿದ್ದೇವೆ. ಐದು ದಿನಗಳು ಸಾಂಪ್ರದಾಯಿಕ ಪೂಜಾ ವಿಧಿ– ವಿಧಾನಗಳು ನಡೆಯುತ್ತವೆ. ವಿದ್ಯಾರ್ಥಿಗಳಿಗೆ ಕ್ವಿಜ್ ಕಾರ್ಯಕ್ರಮ ಏರ್ಪಡಿಸುವ ಮೂಲಕ ಜ್ಞಾನಾರ್ಜನೆಗೆ ಪ್ರೋತ್ಸಾಹಿಸಲಾಗುತ್ತಿದೆ. ಶುಕ್ರವಾರ ವಿಸರ್ಜನೆ ದಿನದಂದು ಅನ್ನ ಸಂತರ್ಪಣೆ ನಡೆಯುತ್ತದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಭದ್ರಾ ನಾಲೆಯಲ್ಲಿ ವಿಸರ್ಜನೆ ನಡೆಯಲಿದೆ’ ಎಂದು ಸಂಘದ ಅಧ್ಯಕ್ಷ ಇಮ್ರಾನ್ ತಿಳಸಿದರು.
ಸುನಿಲ್ ಕುಮಾರ್, ಖಲಂದರ್, ದಾದಾಪೀರ್ ಬಿ. ದವಲಜ್ಜೇರ್, ಜಯಪ್ಪ ಹೊನ್ನೂರು, ನಿಸಾರ್ ಅಹಮದ್, ರವಿ, ಸುರೇಶ್, ಮಾರುತಿ, ಕರಿಯಪ್ಪ, ದರ್ಶನ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.