ಆಭರಣಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದಿದ್ದೆ. ಚಿನ್ನಾಭರಣ ಬ್ಯಾಂಕಿನಿಂದ ಕಳವಾದ ಬಳಿಕ ಆತಂಕವಾಗಿತ್ತು. ಆಭರಣ ಮರಳಿ ಸಿಗುವ ಭರವಸೆ ಮೂಡಿದೆ
ನರಸಮ್ಮ ಗ್ರಾಹಕಿ
ಅಡವಿಡುವ ಚಿನ್ನಾಭರಣಕ್ಕೆ ಬ್ಯಾಂಕ್ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಬ್ಯಾಂಕ್ ಸುರಕ್ಷಿತ ಎಂಬ ಭಾವನೆ ಮೂಡಿಸಬೇಕು. ಚಿನ್ನಾಭರಣ ಪತ್ತೆ ಮಾಡಿದ ಪೊಲೀಸರ ಕಾರ್ಯ ಶ್ಲಾಘನೀಯ
ಎನ್.ನಾಗರಾಜಪ್ಪ ನಿವೃತ್ತ ಉಪ ತಹಶೀಲ್ದಾರ್
‘ಅಸಲು ಮಾತ್ರ ಪಡೆಯಿರಿ’
‘ಪಟ್ಟಣದ ಎಸ್‌ಬಿಐ ಶಾಖೆಯಲ್ಲಿ 2024ರಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಮಾರ್ಚ್‌ನಲ್ಲಿ ಪತ್ತೆ ಹಚ್ಚಿರುವ ಪೊಲೀಸರ ಕಾರ್ಯ ಶ್ಲಾಘನೀಯವಾದುದು. ಇಷ್ಟು ಕಾಲ ತಾಳ್ಮೆಯಿಂದ ಕಾದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. ‘ಕಳವು ಪ್ರಕರಣ ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸರು ಪ್ರಾಮಾಣಿಕ ಪ್ರಯತ್ನ ಮಾಡಿದ್ದರ ಫಲವಾಗಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇದು ಹೆಮ್ಮೆಯ ಸಂಗತಿ ಕೂಡ ಹೌದು. ಬ್ಯಾಂಕ್ ಅಧಿಕಾರಿಗಳು ಆದಷ್ಟು ಬೇಗ ನಿಯಮಾನುಸಾರ ವಾರಸುದಾರರಿಗೆ ಚಿನ್ನಾಭರಣ ಹಿಂತಿರುಗಿಸಬೇಕು. ಅಡವಿಟ್ಟಿರುವ ಚಿನ್ನಾಭರಣದ ಮೇಲೆ ಅಸಲು ಮಾತ್ರ ಪಾವತಿಸಿಕೊಳ್ಳಬೇಕು’ ಎಂದು ಬ್ಯಾಂಕ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.