ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ವಾಹನ ಸವಾರರ ಜೀವಕ್ಕೆ ಕಂಟಕ

ಹರಿಹರ-ದಾವಣಗೆರೆ ಹೆದ್ದಾರಿಯ ವಿಭಜಕದ ಬಳಿ ಶೇಖರಣೆಗೊಂಡ ಮಣ್ಣು
Published 25 ಏಪ್ರಿಲ್ 2024, 5:20 IST
Last Updated 25 ಏಪ್ರಿಲ್ 2024, 5:20 IST
ಅಕ್ಷರ ಗಾತ್ರ

ಹರಿಹರ: ಅವಳಿ ನಗರಗಳಾದ ಹರಿಹರ-ದಾವಣಗೆರೆ ಮಧ್ಯದ ಹಳೆ ಪಿ.ಬಿ.ರಸ್ತೆಯ (ಬೀರೂರು-ಸಮ್ಮಸಗಿ ಹೆದ್ದಾರಿ) ಹಲವು ಕಿ.ಮೀ. ಉದ್ದದ ರಸ್ತೆ ವಿಭಜಕದ (ಮೀಡಿಯನ್) ಎರಡೂ ಬದಿ ಮಣ್ಣು ಸಂಗ್ರಹವಾಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ವಾರ್ಷಿಕ ನಿರ್ವಹಣೆ ಅವಧಿಯಲ್ಲಿ ರಸ್ತೆಯಲ್ಲಿ ಹರಡಿದ್ದ ಮಣ್ಣನ್ನು ಗುಡಿಸಿ ರಸ್ತೆ ವಿಭಜಕದ ಬಳಿ ರಾಶಿ ಹಾಕಲಾಗಿದೆ. ಹೀಗೆ ಮಣ್ಣನ್ನು ಶೇಖರಿಸಿಟ್ಟು ಮೂರು ತಿಂಗಳಾಗಿದ್ದು, ಗಾಳಿಯಿಂದಾಗಿ ಎರಡು ಅಡಿ, ಕೆಲವೆಡೆ ಒಂದೂವರೆ ಅಡಿವರೆಗೆ ಹರಡಿಕೊಂಡಿದೆ. ಗಾಳಿ–ಮಳೆಗೆ ಮಣ್ಣು ಹೆದ್ದಾರಿ ತುಂಬಾ ಹರಡುವ ಅಪಾಯವಿದ್ದು, ಇದರಿಂದ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ. 

ಈ ಹೆದ್ದಾರಿಯಲ್ಲಿ ನಿತ್ಯ 1,200 ಬಸ್ಸು, 12,000 ದ್ವಿಚಕ್ರ ವಾಹನ, 2,200 ಕಾರು, 800 ಆಟೊ, 1,000 ಲಾರಿ  ಸಂಚರಿಸುತ್ತವೆ. ಪ್ರತಿದಿನ ಅಂದಾಜು 1 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ಸಾವಿರಾರು ವಿದ್ಯಾರ್ಥಿಗಳು, ನೌಕರರು, ವಿವಿಧ ಆಸ್ಪತ್ರೆ, ಕಚೇರಿ, ವ್ಯಾಪಾರ ವಹಿವಾಟಿಗೆ ಈ ರಸ್ತೆಯಲ್ಲಿ ಹಗಲು ರಾತ್ರಿ ಸಂಚರಿಸುತ್ತಾರೆ. ವಾಹನಗಳು ಮಣ್ಣಿನ ರಾಶಿಯ ಮೇಲೆ ಹಾದು ಹೋದಾಗ ಸ್ಕಿಡ್‌ ಆಗಿ ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ಮಣ್ಣನ್ನು ತೆರವುಗೊಳಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಶೇಖರಣೆ ಮಾಡಿರುವ ಈ ಮಣ್ಣನ್ನು ನಾಲ್ಕು ಅಡಿ ಎತ್ತರವಿರುವ ಮೀಡಿಯನ್‌ಗೆ ಸುರಿದರೂ ಸಾಕು ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದನ್ನು ಹೀಗೆಯೇ ಬಿಟ್ಟರೆ ಅದು ರಸ್ತೆಯಲ್ಲೆಲ್ಲಾ ಹರಡಿಕೊಳ್ಳುತ್ತದೆ. ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರಿಗೆ ಇದರಿಂದ ಅಪಾಯ ಹೆಚ್ಚು ಎಂದು ತಿಳಿಸಿದ್ದಾರೆ. 

ಗಾಳಿ ಬಂದಾಗ ಈ ಮಣ್ಣು ವಾಹನ ಸವಾರರ ಕಣ್ಣಿಗೆ ರಾಚುತ್ತದೆ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚು. ಆದಷ್ಟು ಬೇಗ ಮಣ್ಣನ್ನು ಸಾಗಿಸಬೇಕು.

-ಹಿದಾಯತ್ ಉಲ್ಲಾ ಹುರಕಡ್ಲಿ ಸ್ಥಳೀಯ ನಿವಾಸಿ

ಹೆದ್ದಾರಿಯಲ್ಲಿ ಶೇಖರಣೆಗೊಂಡಿರುವ ಮಣ್ಣನ್ನು ಶೀಘ್ರವೇ ತೆರವುಗೊಳಿಸುವಂತೆ ಎಇಇ ಅವರಿಗೆ ಸೂಚಿಸಲಾಗುವುದು.

-ನರೇಂದ್ರ ಬಾಬು ಇಇ ಪಿಡಬ್ಲ್ಯೂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT