ಬುಧವಾರ, ಜೂನ್ 23, 2021
29 °C

ಹಳ್ಳಿಗಳಲ್ಲಿ ಪರೀಕ್ಷೆ ಮಾಡದೇ ಸಾಯುವವರ ಸಂಖ್ಯೆ ಹೆಚ್ಚಿದೆ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹಳ್ಳಿಗಳಲ್ಲಿ ಪ್ರತಿದಿನ ಎರಡು ಮೂರು ಜನ ಸಾಯುತ್ತಿದ್ದಾರೆ. ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳದೇ, ಯಾವುದೇ ಆಸ್ಪತ್ರೆಗೆ ಹೋಗದೇ ಮನೆಯಲ್ಲೇ ಇರುವವರರೇ ಈ ರೀತಿ ಮೃತಪಡುತ್ತಿದ್ದಾರೆ. ಹಾಗಾಗಿ ಕೊರೊನಾ ಲಕ್ಷಣ ಕಂಡುಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಈಚೆಗೆ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಶೇ 60ರಷ್ಟು ಗ್ರಾಮೀಣ ಪ್ರದೇಶದವರೇ ಆಗಿದ್ದಾರೆ. ಇದಲ್ಲದೇ ಪರೀಕ್ಷೆಗೊಳಗಾಗದ ಪ್ರಕರಣಗಳು ಇನ್ನೂ ಜಾಸ್ತಿ ಇವೆ. ಏನಾದರೂ ಅನಾರೋಗ್ಯ ಉಂಟಾದರೆ ತಮಗೆ ಪರಿಚಯ ಇರುವ ಖಾಸಗಿ ವೈದ್ಯರು, ಇಲ್ಲವೇ ಮೆಡಿಕಲ್‌ ಶಾಪ್‌ನಿಂದ ಗುಳಿಗೆ ತೆಗೆದುಕೊಂಡು ಸುಮ್ಮನಿರುತ್ತಾರೆ. ಇದು ಬಹಳ ಅಪಾಯಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ಕೊರೊನಾ ಪರೀಕ್ಷೆ ಮಾಡಿಸಲು ನಮ್ಮ ತಂಡ ಬಂದಾಗ ಪರೀಕ್ಷೆ ಬೇಡ ಎಂದು ಯಾರೂ ಹೇಳಬಾರದು. ಪರೀಕ್ಷೆ ಮಾಡಿಸಲು ಸಹಕಾರ ನೀಡಬೇಕು. ಅಗತ್ಯ ಇರುವವರು ಚಿಕಿತ್ಸೆ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಮನವಿ ಮಾಡಿಕೊಂಡು ಅದರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.