ಚೆಕ್ ಬೌನ್ಸ್, ಪಾಲು ವಿಭಾಗ, ನಿರ್ದಿಷ್ಟ ಪರಿಹಾರ, ಬ್ಯಾಂಕ್ ದಾವೆ, ಅಮಲ್ಜಾರಿ ಸೇರಿದಂತೆ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿರುವ ಸಿವಿಲ್ ಮತ್ತು ಕ್ರಿಮಿನಲ್ ಸ್ವರೂಪದ 552 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ₹ 70.43 ಲಕ್ಷ ಕಕ್ಷಿದಾರರಿಗೆ ಪಾವತಿಯಾಗಿದೆ. ಒಟ್ಟು 841 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 56 ಜನನ, 6 ಐಪಿಸಿ, 11 ಚೆಕ್ ಬೌನ್ಸ್, 3 ಪಾಲು ವಿಭಾಗ, 46 ತಪ್ಪೊಪ್ಪಿಗೆ ಪ್ರಕರಣ ಸೇರಿ 542 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ.