ದಾವಣಗೆರೆ: ಅದು ಸರಸ್ವತಿ ಬಡಾವಣೆಯ ಮನೆ. ಕುಟುಂಬದಲ್ಲಿ ಐವರು ಸದಸ್ಯರಿದ್ದಾರೆ. ಜಲಸಿರಿ ಯೋಜನೆಯಡಿ ನಳ ಸಂಪರ್ಕ ಸಿಕ್ಕಾಗ ನೀರಿನ ಬವಣೆ ನೀಗುವ ವಿಶ್ವಾಸ ಮೂಡಿತ್ತು. ಜೂನ್ನಲ್ಲಿ ನೀರಿನ ಬಿಲ್ ಕೈಗೆ ಬಂದಾಗ ಮನೆ ಮಾಲೀಕರು ಗಾಬರಿಯಾಗಿದ್ದರು. ಮೊದಲ ತಿಂಗಳ ₹ 1,243 ಶುಲ್ಕ ಅವರಲ್ಲಿ ಅಸಮಾಧಾನ ಮೂಡಿಸಿತ್ತು.

ಎಸ್.ಎಸ್. ಬಡಾವಣೆಯ ಕುಟುಂಬವೊಂದು ತಿಂಗಳ ಬಹುಪಾಲು ದಿನಗಳನ್ನು ಬೆಂಗಳೂರಿನಲ್ಲಿ ಕಳೆದಿತ್ತು. ಮಹಡಿ ಮೇಲಿನ ಬಾಡಿಗೆ ಮನೆಯೂ ಖಾಲಿ ಇತ್ತು. ದಾವಣಗೆರೆಗೆ ಮರಳಿದಾಗ ಬಾಗಿಲ ಬಳಿಯ ನೀರಿನ ಬಿಲ್ ಕಂಡು ಮಾಲೀಕರು ಕ್ಷಣಕಾಲ ಅವಕ್ಕಾದರು. ಬಳಕೆ ಮಾಡದ ನೀರಿಗೆ ಮಹಾನಗರ ಪಾಲಿಕೆ ₹ 1,000ಕ್ಕೂ ಅಧಿಕ ಬಿಲ್ ವಿಧಿಸಿತ್ತು.

ತರಳಬಾಳು ಬಡಾವಣೆಯ ಮನೆಯೊಂದರಲ್ಲಿ ಪತಿ–ಪತ್ನಿ ವಾಸವಾಗಿದ್ದಾರೆ. ಮನೆಯ ಯಜಮಾನ ಉದ್ಯೋಗ ನಿಮಿತ್ತ ಆಗಾಗ ಹೊರಜಿಲ್ಲೆಯ ಪ್ರವಾಸದಲ್ಲಿರುತ್ತಾರೆ. ತಿಂಗಳಿಗೆ 90,000 ಲೀಟರ್ ನೀರು ಬಳಕೆ ಮಾಡಿರುವುದಾಗಿ ಬಿಲ್ನಲ್ಲಿ ನಮೂದಾಗುತ್ತಿದೆ. ಮಹಾನಗರ ಪಾಲಿಕೆಯ ಗ್ರಾಹಕ ಸೇವಾ ಕೇಂದ್ರಕ್ಕೆ ಹಲವು ಬಾರಿ ಅಲೆದರೂ ಪರಿಹಾರ ಸಿಕ್ಕಿಲ್ಲ.

ಪ್ರತಿ ಮನೆಗೆ 24X7 ನೀರು ಪೂರೈಸುವ ಮಹತ್ವಾಕಾಂಕ್ಷೆಯೊಂದಿಗೆ ದಾವಣಗೆರೆ ಮಹಾನಗರ ಪಾಲಿಕೆ ಜಾರಿಗೆ ತಂದಿರುವ ಜಲಸಿರಿ ಯೋಜನೆಯಿಂದ ಜನರು ಅನುಭವಿಸುತ್ತಿರುವ ಬವಣೆಗಳಿವು. ಜಲಸಿರಿ ಯೋಜನೆಯಡಿ ಪೂರೈಕೆಯಾಗುವ ನೀರಿಗೆ ಪ್ರತಿ ತಿಂಗಳು ನೀಡುವ ಬಿಲ್ ಕಂಡು ಜನರು ಬೆವರುತ್ತಿದ್ದಾರೆ. ಮಾಸಿಕ ಸಾವಿರಾರು ರೂಪಾಯಿ ಶುಲ್ಕ ಪಾವತಿಸುವುದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ.

ಪೂರ್ಣಗೊಳ್ಳದ ಕಾಮಗಾರಿ: ದಾವಣಗೆರೆ ನಗರಕ್ಕೆ ನಿತ್ಯ 770 ಲಕ್ಷ ಲೀಟರ್ (77 ಎಂ.ಎಲ್.ಡಿ) ನೀರಿನ ಅಗತ್ಯವನ್ನು ಗಮನಿಸಿ ಜಲಸಿರಿ ಯೋಜನೆ ರೂಪಿಸಲಾಗಿದೆ. 2046ಕ್ಕೆ ನಗರದ ಜನಸಂಖ್ಯೆ ಎಷ್ಟಾಗಬಹುದು ಎಂಬ ಪರಿಕಲ್ಪನೆಯೊಂದಿಗೆ ₹ 460 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಜಲ ಶುದ್ಧೀಕರಣ ಘಟಕ, ಓವರ್ ಹೆಡ್ ಟ್ಯಾಂಕ್ ಸೇರಿ ನೀರು ಪೂರೈಕೆ ವ್ಯವಸ್ಥೆ ಹೊಸರೂಪ ಪಡೆದಿದೆ. ಆದರೆ, ಇದಕ್ಕೆ ವಿಧಿಸುವ ಶುಲ್ಕ ಜನರಲ್ಲಿ ದೊಡ್ಡ ಅಸಮಾಧಾನಕ್ಕೆ ಕಾರಣವಾಗಿದೆ.

ಜಲಸಿರಿ ಯೋಜನೆ ಅನುಷ್ಠಾನಕ್ಕೂ ಮುನ್ನ ನೀರಿನ ಕರವನ್ನು ವಾರ್ಷಿಕವಾಗಿ ಪಾವತಿಸಬೇಕಿತ್ತು. ವರ್ಷಕ್ಕೆ ₹ 2,500 ರಿಂದ ₹ 3,000ದವರೆಗೆ ನೀರಿನ ಕಂದಾಯ ನಿಗದಿಪಡಿಸಲಾಗಿತ್ತು. ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಜಲಸಿರಿ ಯೋಜನೆಯನ್ನು 2018ರಲ್ಲಿ ಕೈಗೆತ್ತಿಕೊಳ್ಳಲಾಯಿತು. 2022ರಲ್ಲಿ ಈ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಈವರೆಗೆ ನಗರದ 32 ವಲಯಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದ 18 ವಲಯಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಇನ್ನೂ ಅನುಷ್ಠಾನ ಹಂತದಲ್ಲಿದೆ.

ಶುಲ್ಕ ವಿಧಿಸುವುದು ಹೀಗೆ: ಜಲಸಿರಿ ಯೋಜನೆಯಡಿ ಪ್ರತಿ ನಳಕ್ಕೆ ಮಾಸಿಕ ಕನಿಷ್ಠ ₹ 56 ಶುಲ್ಕವಿದೆ. 8,000 ಲೀಟರ್ವರೆಗೆ ನೀರು ಬಳಕೆಗೆ ಅವಕಾಶವಿದೆ. ಇಷ್ಟು ಪ್ರಮಾಣದ ನೀರು ಬಳಕೆ ಮಾಡದೇ ಇದ್ದರೂ ಕನಿಷ್ಠ ಶುಲ್ಕ ಪಾವತಿ ಕಡ್ಡಾಯ. 8,000 ರಿಂದ 15,000 ಲೀಟರ್ವರೆಗೆ ಪ್ರತಿ ಸಾವಿರ ಲೀಟರ್ಗೆ ₹ 9 ನಿಗದಿಪಡಿಸಲಾಗಿದೆ. 15,000ದಿಂದ 25,000 ಲೀಟರ್ ನೀರಿಗೆ ಪ್ರತಿ ಸಾವಿರ ಲೀಟರ್ಗೆ ₹ 11 ಹಾಗೂ 25,000 ಮೇಲ್ಪಟ್ಟು ಬಳಕೆ ಮಾಡುವ ನೀರಿಗೆ ಪ್ರತಿ ಸಾವಿರ ಲೀಟರ್ಗೆ ₹ 13 ಶುಲ್ಕ ನಿಗದಿಪಡಿಸಲಾಗಿದೆ.

ಪ್ರತಿ ತಿಂಗಳು 1ರಿಂದ 15ನೇ ತಾರೀಖಿನ ಒಳಗೆ ನೀರಿನ ಶುಲ್ಕವನ್ನು ನೀಡಲಾಗುತ್ತದೆ. ನೀರಿನ ಬಳಕೆಯ ಪ್ರಮಾಣವನ್ನು ಅಳತೆ ಮಾಡುವ ಮೀಟರ್ನಲ್ಲಿ ದಾಖಲಾಗುವ ಅಂಕಿ–ಅಂಶಗಳನ್ನು ಆಧರಿಸಿ ಬಿಲ್ ನಿಗದಿಯಾಗುತ್ತದೆ. ಶುಲ್ಕ ಪಾವತಿಗೆ 15 ದಿನಗಳವರೆಗೆ ಕಾಲಾವಕಾಶವಿರುತ್ತದೆ. ಆ ಬಳಿಕ ಬಾಕಿ ಉಳಿಸಿಕೊಂಡ ನೀರಿನ ಶುಲ್ಕದ ಪ್ರತಿ ₹ 100ಕ್ಕೆ ಮಾಸಿಕ ₹ 1ರಂತೆ ಬಡ್ಡಿ ವಿಧಿಸಲು ಮಾರ್ಗಸೂಚಿಯಲ್ಲಿ ಅವಕಾಶವಿದೆ.ಪ್ರಾರಂಭದ ಕೆಲ ತಿಂಗಳು ಶುಲ್ಕವಿರಲಿಲ್ಲ. ಹಲವು ತಿಂಗಳು ಕನಿಷ್ಠ ಶುಲ್ಕ (₹ 56) ಮಾತ್ರ ನಿಗದಿಪಡಿಸಲಾಗಿತ್ತು. 5 ತಿಂಗಳಿಂದ ಶುಲ್ಕದ ಹೊರೆ ಹೆಚ್ಚಾಗಿದೆ.

ಪ್ರಾರಂಭದ ಕೆಲ ತಿಂಗಳು ಶುಲ್ಕವಿರಲಿಲ್ಲ. ಹಲವು ತಿಂಗಳು ಕನಿಷ್ಠ ಶುಲ್ಕ (₹ 56) ಮಾತ್ರ ನಿಗದಿಪಡಿಸಲಾಗಿತ್ತು. 5 ತಿಂಗಳಿಂದ ಶುಲ್ಕದ ಹೊರೆ ಹೆಚ್ಚಾಗಿದೆ.
ಮಹೇಶ್ ತರಳಬಾಳು ನಗರ ದಾವಣಗೆರೆ

ಕೆಎಚ್ಬಿ ಬಡಾವಣೆ ಸ್ಥಾಪನೆಯಾಗಿ ಹತ್ತಾರು ವರ್ಷಗಳೇ ಕಳೆದಿವೆ. ಈವರೆಗೂ ಈ ಭಾಗದ ಜನರಿಗೆ ಕೊಳವೆಬಾವಿ ನೀರೇ ಗತಿಯಾಗಿದೆ.
ಸಿದ್ದಲಿಂಗಸ್ವಾಮಿ ಕೆಎಚ್ಬಿ ಬಡಾವಣೆ ನಿವಾಸಿ

ಜಲಸಿರಿ ಶುಲ್ಕ: ಹೆಚ್ಚಿದ ದೂರು ಜಲಸಿರಿ ಯೋಜನೆಯ ದೂರು–ದುಮ್ಮಾನಗಳಿಗೆ ಮಹಾನಗರ ಪಾಲಿಕೆ ಸಹಾಯವಾಣಿ ತೆರೆದಿದೆ. ನೀರು ಹಾಗೂ ಶುಲ್ಕಕ್ಕೆ ಸಂಬಂಧಿಸಿದ ದೂರುಗಳಿದ್ದರೆ ಗ್ರಾಹಕರ ಸೇವಾ ಕೇಂದ್ರದ ಮೊಬೈಲ್ ಸಂಖ್ಯೆ 9036544419ಗೆ ಸಂಪರ್ಕಿಸಬಹುದು. ಸಹಾಯವಾಣಿಗೆ ಬರುತ್ತಿರುವ ದೂರುಗಳ ಸಂಖ್ಯೆ ಏರಿಕೆಯಾಗಿದೆ ಎನ್ನುತ್ತವೆ ಪಾಲಿಕೆಯ ಮೂಲಗಳು. ಶುಲ್ಕದಲ್ಲಿ ಆಗಿರುವ ವ್ಯತ್ಯಾಸ ನಿಗದಿತ ಸಮಯಕ್ಕೆ ನೀರು ಬಾರದಿರುವುದು ನೀರಿನ ಬಳಕೆಯ ಪ್ರಮಾಣ ತೋರಿಸುವ ಮೀಟರ್ ಬಗೆಗಿನ ಆಕ್ಷೇಪ ಸೇರಿದಂತೆ ಹಲವು ವಿಚಾರಗಳಿಗೆ ಸಹಾಯವಾಣಿಯನ್ನು ಜನರು ಸಂಪರ್ಕಿಸುತ್ತಿದ್ದಾರೆ. ಇಲ್ಲಿ ಪರಿಹಾರ ಸಿಗದಿದ್ದರೆ ಮಹಾನಗರ ಪಾಲಿಕೆಯ ಮುಖ್ಯ ಕಚೇರಿ ಹಾಗೂ ವಲಯ ಕಚೇರಿಯ ಜಲಸಿರಿ ಗ್ರಾಹಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಲು ಅವಕಾಶವಿದೆ. ‘ನೀರಿನ ಶುಲ್ಕದ ಅನುಮಾನ ಪರಿಹರಿಸಿಕೊಳ್ಳಲು ಸಹಾಯವಾಣಿ ಸಂಪರ್ಕಿಸಿದ್ದೆ. ಎಸ್.ಎಸ್. ಬಡಾವಣೆಯಲ್ಲಿ ಜಲಸಿರಿ ಯೋಜನೆ ಅನುಷ್ಠಾನ ಹಂತದಲ್ಲಿದ್ದು ಶುಲ್ಕ ಪಾವತಿಸುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ಆದರೆ ಮಹಾನಗರ ಪಾಲಿಕೆ ಸಿಬ್ಬಂದಿ ಬಿಲ್ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದರು.

ಮೀಟರ್ ಮೇಲೆ ಅನುಮಾನ ಎಂದಿನಂತೆ ನೀರು ಬಳಕೆ ಮಾಡಿದರೂ ಪ್ರತಿ ತಿಂಗಳ ಬಿಲ್ನಲ್ಲಿ ವ್ಯತ್ಯಾಸ ಕಾಣುತ್ತಿದೆ. ಒಮ್ಮೊಮ್ಮೆ ಕನಿಷ್ಠ ನೀರಿನ ಶುಲ್ಕ ನಿಗದಿಯಾದರೆ ಮತ್ತೊಂದು ತಿಂಗಳು ನೀರಿನ ಬಳಕೆಯ ಪ್ರಮಾಣದಲ್ಲಿ ಭಾರಿ ಏರಿಕೆ ಆಗಿರುತ್ತದೆ. ಪ್ರತಿ ತಿಂಗಳು ಸಾವಿರಾರು ರೂಪಾಯಿ ಶುಲ್ಕ ಪಾವತಿಸುವುದು ಹಳೆಯ ನೀರಿನ ಕಂದಾಯಕ್ಕಿಂತ ದುಬಾರಿ. ‘ಸರಸ್ವತಿ ಬಡಾವಣೆಯಲ್ಲಿ 3–4 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕೊಳವೆಬಾವಿ ನೀರಿನ ಮೇಲಿನ ಅವಲಂಬನೆಯೇ ಹೆಚ್ಚಾಗಿದೆ. ಆದರೆ ಪ್ರತಿ ತಿಂಗಳು ಬರುವ ಬಿಲ್ ಕಂಡು ಅಚ್ಚರಿಯಾಗುತ್ತಿದೆ. ಜಲಸಿರಿ ಯೋಜನೆಯ ಮೀಟರ್ ಮೇಲೆಯೇ ಅನುಮಾನವಿದೆ’ ಎಂಬುದು ನಿವಾಸಿಯೊಬ್ಬರ ದೂರು.

ಹೊರವಲಯಕ್ಕೆ ಸಿಗದ ‘ಜಲಸಿರಿ’ ಇನಾಯತ್ ಉಲ್ಲಾ ಟಿ. ಹರಿಹರ: ನದಿ ತೀರದ ಊರು ಹರಿಹರದಲ್ಲಿ 3 ವರ್ಷಗಳಿಂದ 24 ಗಂಟೆ ನೀರು ಹರಿಸುವ ಜಲಸಿರಿ ಯೋಜನೆ ಜಾರಿಯಲ್ಲಿದೆ. ನೀರಿಗಾಗಿ ಕಾಯುತ್ತಾ ನಿಲ್ಲುತ್ತಿದ್ದ ಜನರ ಸಂಕಷ್ಟ ಬಹುಮಟ್ಟಿಗೆ ಬಗೆಹರಿದಿದೆ. ಹಳೆ ಪದ್ಧತಿಗಿಂತ ನೀರು ರಭಸವಾಗಿ ಹರಿಯುವುದರಿಂದ 1ನೇ ಮಹಡಿ 2ನೇ ಮಹಡಿಗೂ ಮೋಟಾರ್ ಸಹಾಯವಿಲ್ಲದೇ ನೀರು ಏರುತ್ತಿದೆ. ಆದರೆ ನಗರದ ಹೊರವಲಯದ ಕೆಎಚ್ಬಿ ಕಾಲೊನಿಗೆ ಈ ನೀರು ಹರಿಯುತ್ತಿಲ್ಲ. ಜಲಸಿರಿ ಕಾಮಗಾರಿ ಅಲ್ಲಿ ಆಮೆಗತಿಯಲ್ಲಿ ನಡೆಯುತ್ತಿದೆ. ನಗರದ ಹಲವೆಡೆ ಚರಂಡಿಗಳ ಮೂಲಕ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲಾಗಿದೆ. ಇನ್ನೂ ಕೆಲವೆಡೆ ಒಳಚರಂಡಿ ಪೈಪ್ಲೈನ್ಗೆ ತಾಗಿಯೇ ಜಲಸಿರಿ ಕೊಳವೆ ಮಾರ್ಗ ಅಳವಡಿಕೆ ಮಾಡಲಾಗಿದೆ. ಇದರಿಂದ ಚರಂಡಿ ನೀರು ಕುಡಿಯುವ ನೀರಿನ ಜೊತೆಗೆ ಮಿಶ್ರಣವಾಗಬಹುದೆಂಬ ಆತಂಕ ಎದುರಾಗಿದೆ. ಇನ್ನೂ ನದಿಯಿಂದ ನೀರೆತ್ತುವ ಕವಲೆತ್ತು ಬಳಿ ಜಾಕ್ವೆಲ್ಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಕನ್ನಡಿಯ ಗಂಟಾಗಿ ಉಳಿದಿದೆ. ಇದರಿಂದ ನಿತ್ಯ ಹಲವು ಬಾರಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ನೀರೆತ್ತುವ ಕಾರ್ಯವೂ ಸ್ಥಗಿತವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.