ಚನ್ನಗಿರಿ: ತಾಲ್ಲೂಕಿನಾದ್ಯಂತ ಕಳೆದ ವಾರ ಮುಂಗಾರು ಪೂರ್ವ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಎಲ್ಲೆಡೆ ಭೂಮಿ ಉಳುಮೆ ಮಾಡುವ ಕಾರ್ಯ ಭರದಿಂದ ಸಾಗಿದೆ. ರೈತರು ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಆರಂಭಿಸಿದ್ದು, ಕೆಲವರು ರಸಗೊಬ್ಬರ, ಬಿತ್ತನೆ ಬೀಜ ಖರೀದಿಸಿ ಮನೆಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ.

ಮೇ 2ರಂದು ಚನ್ನಗಿರಿಯಲ್ಲಿ 40.6 ಮಿ.ಮೀ, ದೇವರಹಳ್ಳಿ 24.6, ಕತ್ತಲಗೆರೆ 48.3, ತ್ಯಾವಣಗಿ 94.6, ಬಸವಾಪಟ್ಟಣ 40.2, ಜೋಳದಹಾಳ್ 81, ಸಂತೇಬೆನ್ನೂರು 14, ಉಬ್ರಾಣಿ 3.2 ಹಾಗೂ ಕೆರೆಬಿಳಚಿ ಗ್ರಾಮದಲ್ಲಿ 40.6 ಮಿ.ಮೀ. ಮಳೆಯಾಗಿದೆ. ಒಂದೇ ದಿನ ರಾತ್ರಿ ಸರಾಸರಿ 43.01 ಮಿ.ಮೀ. ಮಳೆಯಾಗಿತ್ತು.

ತಾಲ್ಲೂಕಿನ ಗುಳ್ಳೆಹಳ್ಳಿ, ಗರಗ, ದೇವರಹಳ್ಳಿ, ಹೊನ್ನನಾಯಕನಹಳ್ಳಿ, ನಾರಶೆಟ್ಟಿಹಳ್ಳಿ, ಚನ್ನಗಿರಿ, ಮುದ್ದೇನಹಳ್ಳಿ, ಬುಸ್ಸೇನಹಳ್ಳಿ, ಆಕಳಕಟ್ಟೆ, ನುಗ್ಗಿಹಳ್ಳಿ, ಕಾಕನೂರು, ದೊಡ್ಡೇರಿಕಟ್ಟೆ, ಜೋಳದಹಾಳ್, ಹರೋನಹಳ್ಳಿ, ಗೋಪನಾಳ್, ಹಿರೇಉಡ, ಅರಳಿಕಟ್ಟೆ, ನೀತಿಗೆರೆ, ಸಂತೇಬೆನ್ನೂರು, ನಾಗೇನಹಳ್ಳಿ, ದೊಡ್ಡಬ್ಬಿಗೆರೆ, ನಲ್ಲೂರು, ಹಿರೇಮಳಲಿ ಮುಂತಾದ ಗ್ರಾಮಗಳಲ್ಲಿ ಟ್ರ್ಯಾಕ್ಟರ್ಗಳ ಮೂಲಕ ಭೂಮಿ ಉಳುಮೆ ಮಾಡುವ ಕಾರ್ಯ ಚುರುಕಿನಿಂದ ಸಾಗಿದೆ.

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಪ್ರಮುಖವಾಗಿ ಮೆಕ್ಕೆಜೋಳ, ಹತ್ತಿ, ಪಾಪ್ಕಾರ್ನ್, ಈರುಳ್ಳಿ, ತೊಗರಿ, ಅಲಸಂದೆ, ಸೋಯಾಬಿನ್, ರಾಗಿ ಬೆಳೆಯಲಾಗುತ್ತದೆ. ಜೂನ್ ತಿಂಗಳ ಮೊದಲ ವಾರದಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತದೆ ಎಂದು ಹವಾಮಾನ ಇಲಾಖೆ ಘೋಷಣೆ ಮಾಡಿರುವುದರಿಂದ ರೈತರು ಕೃಷಿ ಕಾಯಕದ ಕಡೆ ಹೆಚ್ಚು ಆಸಕ್ತಿಯನ್ನು ತೋರುವಂತಾಗಿದೆ.

‘ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬಿತ್ತನೆಗೆ ಭೂಮಿ ಹದ ಮಾಡಲು ಆರಂಭಿಸಿದ್ದೇವೆ. ಎಲ್ಲೆಡೆ ಉಳುಮೆ ಕಾರ್ಯ ಆರಂಭವಾಗಿರುವುದರಿಂದ ಟ್ರ್ಯಾಕ್ಟರ್ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಬಾರಿ ಉತ್ತಮವಾಗಿ ಮುಂಗಾರು ಮಳೆಯಾಗುವ ನಿರೀಕ್ಷೆಯಲ್ಲಿ ಬಿತ್ತನೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ತಾಲ್ಲೂಕಿನ ನುಗ್ಗಿಹಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ್.

ತಿಂಗಳಾಂತ್ಯಕ್ಕೆ ಬಿತ್ತನೆ ಬೀಜ ವಿತರಣೆ

ತಾಲ್ಲೂಕಿನ ಎಲ್ಲೆಡೆ ಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆಗೆ ಅಗತ್ಯವಾದ ರಸಗೊಬ್ಬರವನ್ನು ಸಹಕಾರ ಸಂಘ ತುಮ್ಕೋಸ್ ಹಾಗೂ ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಸಂಗ್ರಹ ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಸ್. ಅರುಣ್ ಕುಮಾರ್ ತಿಳಿಸಿದರು. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡುವ ಬೀಜಗಳನ್ನು ಮೇ ತಿಂಗಳ ಕೊನೆಯ ವಾರ ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.