ಕುಮಟಾ: ಅಪರಿಚಿತಯುವಕನೊಬ್ಬ ಬೀದಿ ನಾಯಿಮರಿಗೆಬಲವಂತವಾಗಿಮದ್ಯ ಕುಡಿಸಿ ವಿಕೃತ ಸಂತೋಷಪಟ್ಟ ವಿಡಿಯೊಸಾಮಾಜಿಕ ಜಾಲತಾಣದಲ್ಲಿಹರಿದಾಡುತ್ತಿದೆ.

ವಾಟ್ಸ್ಆ್ಯಪ್ನಲ್ಲಿ ಬಂದ ಮಾಹಿತಿ ಪ್ರಕಾರ ತಾಲ್ಲೂಕಿನ ಹೊಲನಗದ್ದೆಯ ಕಡ್ಲೆ ಮೈದಾನದಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಜಾಕೆಟ್ ಹಾಕಿ, ದಾಡಿ ಬಿಟ್ಟಿಕೊಂಡಿರುವಆತ, ಬಾಟಲಿಯಲ್ಲಿ ಉಳಿದಿರುವ ಸ್ವಲ್ಪ ಮದ್ಯವನ್ನು ನಾಯಿಮರಿಗೆ ಒತ್ತಾಯವಾಗಿ ಕುಡಿಸುತ್ತಾನೆ. ಅದು ತಪ್ಪಿಸಿಕೊಂಡು ಹೋಗಲು ಯತ್ನಿಸಿದರೂ ಬಿಡದ ಅವನು, ‘ಇಷ್ಟು ತಿಂಡಿ ತಿಂದಿದ್ದಿಯಾ.. ಸ್ವಲ್ಪ ಇದೆ, ಲಾಸ್ಟ್ ಪೆಗ್ ಕುಡಿದುಬಿಡು’ ಎನ್ನುತ್ತಾನೆ. ಅದನ್ನು ಆತನ ಸ್ನೇಹಿತಇರಬಹುದಾದ ಇನ್ನೊಬ್ಬ ವ್ಯಕ್ತಿ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾನೆ.

ಹೊಲನಗದ್ದೆಯ ಸುಂದರ ಕಡ್ಲೆ ಮೈದಾನ, ಸ್ಥಳೀಯ ಶಾಲೆ ಮಕ್ಕಳ ಕ್ರೀಡಾಕೂಟಕ್ಕೆ, ಅಕ್ಕಪಕ್ಕದವರ ವಾಯು ವಿಹಾರಕ್ಕೆ ಬಳಕೆಯಾಗುತ್ತದೆ.ಹಗಲು, ರಾತ್ರಿಮದ್ಯ ಸೇವನೆಯ ತಾಣವಾಗಿಯೂ ಬಳಕೆಯಾಗುತ್ತದೆ. ಈ ಬಗ್ಗೆ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದಾಗ, ‘ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ಹೇಳಿದ್ದಾರೆ.

ಕುಮಟಾದ ‘ಖುಷಿ’ ಪರಿಸರ ಸಂಘದ ಸದಸ್ಯೆಯಯೂ ಆಗಿರುವ ಸಸ್ಯಶಾಸ್ತ್ರದ ನಿವೃತ್ತ ಪ್ರಾಧ್ಯಾಪಕಿ ಗೀತಾ ನಾಯಕ, ‘ಮನುಷ್ಯನ ವಿಕೃತಿ ಸಾಕುಪ್ರಾಣಿಗಳ ಮೇಲೆ ತಿರುಗಿರುವುದು ಅಪಾಯದ ಸೂಚನೆ. ವಿಡಿಯೊದಲ್ಲಿ ಕಂಡು ಬರುವ ವ್ಯಕ್ತಿಯು ತಾನು ಕೆಟ್ಟಿದ್ದಲ್ಲದೇಇಡೀ ಪರಿಸರವನ್ನು ಹಾಳು ಮಾಡುವ ರೀತಿ ವರ್ತಿಸಿದ್ದಾನೆ. ಇಂಥದ್ದನ್ನು ಪ್ರಜ್ಞಾವಂತರು ಖಂಡಿಸಿ ತಡೆಯಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.