ಹೊನ್ನಾಳಿ: ‘ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕುಂಚಿಟಿಗ ಸಮಾಜದಚರು ಜಾತಿ ಕಾಲಂನಲ್ಲಿ ಕುಂಚಿಟಿಗ ಎಂದು, ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಯಿಸಬೇಕು’ ಎಂದು ದಾವಣಗೆರೆ ಜಿಲ್ಲಾ ಕುಂಚಿಟಿಗ ಸಮಾಜದ ಅಧ್ಯಕ್ಷ ರಂಗನಾಥ್ ಗೌಡ ಮನವಿ ಮಾಡಿದರು.

‘ದಾವಣಗೆರೆ ಕುಂಚಿಟಿಗ ಸಮಾಜದ ಎಲ್ಲ ಮುಖಂಡರು ಸೇರಿ ಈ ತೀರ್ಮಾನ ಕೈಗೊಂಡಿದ್ದು, ನಮ್ಮ ಸಮುದಾಯದ ಮುಂದಿನ ಪೀಳಿಗೆಯವರ ಭವಿಷ್ಯದ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಕುಂಚಿಟಿಗ ಸಮಾಜದ ಮಾಜಿ ಅಧ್ಯಕ್ಷ ಎಂ.ಎಲ್. ಸುರೇಶ್, ಮುಖಂಡರಾದ ಕುಂಕೋವ ರಾಮಚಂದ್ರಪ್ಪ, ತಾಲ್ಲೂಕು ಕುಂಚಿಟಿಗ ನೌಕರರ ಸಂಘದ ಅಧ್ಯಕ್ಷ ತಿಮ್ಮಪ್ಪ, ಶಿಕ್ಷಕರಾದ ಪ್ರಹ್ಲಾದ್, ಎ.ಪಿ.ಶಾಂತರಾಜ್, ಕೆ.ಜಿ.ರಂಗನಾಥ್, ಕೆ. ಅರುಣ್ಕುಮಾರ್, ಸುಂಕದಕಟ್ಟೆ ನರಸಿಂಹಮೂರ್ತಿ, ರಾಘವೇಂದ್ರ, ಸಂತೋಷ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.