ಜಗಳೂರು ತಾಲ್ಲೂಕಿನ ಐತಿಹಾಸಿಕ ಭರಮಸಮುದ್ರ ಕೆರೆ ಕೋಡಿ ಬಿದ್ದು ಹರಿಯುತ್ತಿರುವ ಮನಮೋಹಕ ದೃಶ್ಯ
ಜಗಳೂರು ಕೆರೆ ಕಳೆದ ಅರ್ಧ ಶತಮಾನದಲ್ಲಿ ಎರಡನೇ ಭಾರಿ ಭರ್ತಿಯಾಗಿ ಹರಿಯುತ್ತಿದೆ
‘ಬಯಲುಸೀಮೆಗೆ ವರವಾದ ಏತ ನೀರಾವರಿ’
ಸಿರಿಗೆರೆ ಶ್ರೀ ಹಾಗೂ ಬಜೆಟ್‌ನಲ್ಲಿ ಯೋಜನೆಗೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿಯ ಫಲವಾಗಿ ಇಂದು ಬರಪೀಡಿತ ತಾಲ್ಲೂಕಿನ 50ಕ್ಕೂ ಹೆಚ್ಚು ಕೆರೆಗಳಿಗೆ ತುಂಗಭದ್ರಾ ನೀರು ಹರಿದು ಬರುತ್ತಿದೆ. ದಶಕಗಳ ಕಾಲ ಬರದಿಂದ ನಲುಗಿದ ತಾಲ್ಲೂಕಿನಲ್ಲಿ ಈ ಯೋಜನೆಯ ಯಶಸ್ಸು ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದೆ. ಶತಮಾನಗಳ ಇತಿಹಾಸವಿರುವ ದೊಡ್ಡ ಕೆರೆಗಳು ಅನೇಕ ವರ್ಷಗಳ ನಂತರ ಮೊದಲ ಬಾರಿಗೆ ಮೈದುಂಬುತ್ತಿವೆ. ಈ ಭಾಗದ ಹಿಂದುಳಿದ ಸಣ್ಣ ರೈತರು ಕೃಷಿಯ ಮೂಲಕ ಸುಸ್ಥಿರವಾದ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ. ನದಿಯಲ್ಲಿ ನೀರಿನ ಹರಿವು ಇರುವವರೆಗೆ ಕೆರೆಗಳಿಗೆ ನಿರಂತರವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಬಿ. ದೇವೇಂದ್ರಪ್ಪ ಶಾಸಕ