ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

12ನೇ ಶತಮಾನ ಸುಜ್ಞಾನದ ಬೆಳಕನ್ನು ನೀಡಿದ ಯುಗ: ಗುರುಬಸವ ಸ್ವಾಮೀಜಿ

ಹೊದಿಗೆರೆ ಗ್ರಾಮದಲ್ಲಿ ಶ್ರಾವಣ ಬಂತು, ಅನುಭಾವ ತಂತು ಶ್ರಾವಣ ಸಂಜೆ ಕಾರ್ಯಕ್ರಮ
Published 10 ಆಗಸ್ಟ್ 2024, 16:03 IST
Last Updated 10 ಆಗಸ್ಟ್ 2024, 16:03 IST
ಅಕ್ಷರ ಗಾತ್ರ

ಹೊದಿಗೆರೆ (ಚನ್ನಗಿರಿ): ‘ವಿಶ್ವ ಗುರು ಬಸವಣ್ಣ ಮಹಾ ಮಾನವತಾವಾದಿ, ಭಕ್ತಿಯ ಭಂಡಾರ. ಕಾಯಕದ ಶರಣರಾಗಿ ಅಜ್ಞಾನದ ತಾಮಸ ನಿದ್ರೆಯಲ್ಲಿದ್ದ ಜನರಿಗೆ ಸುಜ್ಞಾನದ ಬೆಳಕನ್ನು ನೀಡಿದವರು’ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಹೊದಿಗೆರೆ ಗ್ರಾಮದ ಗಣಪತಿ ದೇವಸ್ಥಾನದ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದಿಂದ ಗುರುವಾರ ನಡೆದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

12 ನೇ ಶತಮಾನ ಕಾಯಕದಿಂದ ಜ್ಞಾನದಾಸೋಹ, ಸಾಹಿತ್ಯ ಸೃಜನೆಯಿಂದ ವ್ಯಕ್ತಿತ್ವ ವಿಕಸನ ಮಾಡಿದ ಯುಗವಾಗಿದೆ. ಬಸವಣ್ಣ ಕಾಯಕಕ್ಕೆ ಕಳೆ ಕಟ್ಟಿದ ಮಹಾನ್ ಚೇತನ. ಮೂಢನಂಬಿಕೆಯಿಂದ ವೈಚಾರಿಕತೆಯ ಕಡೆಗೆ ಜನರನ್ನು ಪರಿವರ್ತನೆ ಮಾಡಿದಂತಹ ಯುಗ 12 ನೇ ಶತಮಾನವಾಗಿದೆ ಎಂದರು.

ಬೆಂಗಳೂರು ಲಕ್ಕಸಂದ್ರದ ಮೌಲ್ವಿ ನಜೀರ್ ಅಹಮದ್ ಮಾತನಾಡಿ, ಜಗತ್ತಿನಲ್ಲಿ ಈಗ ಸೌಹಾರ್ದತೆ ಮುಖ್ಯವಾಗಿದೆ. ಕಾಯಕ ನಿಷ್ಠೆ ಹಾಗೂ ಬದ್ಧತೆ ಜೀವನದ ಆಧಾರವಾಗಬೇಕು. ಸಂಸ್ಕಾರ ಮತ್ತು ವೈಚಾರಿಕತೆಯನ್ನು ತಿಳಿಸುವ ಕಾರ್ಯವನ್ನು ಮಠಗಳು ಮಾಡುತ್ತಿವೆ ಎಂದು ಹೇಳಿದರು.

ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಂ. ರಾಜಪ್ಪ, ಗೌರವಾಧ್ಯಕ್ಷ ಎಂ.ಯು. ಚನ್ನಬಸಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಮುಂಜುಳ ಟಿ.ವಿ. ರಾಜು, ದಾಸೋಹಿ ಹುಗ್ಗಿ ಮಂಜುನಾಥ್, ಧನಜಂಯ್, ಕೆ.ಜಿ. ಶಿವಮೂರ್ತಿ, ಚಂದ್ರಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT