ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಎರಡನೇ ಹಂತದ ತರಬೇತಿಗೆ ರ‍್ಯಾಂಡಮೈಜೇಷನ್‌

Published 21 ಏಪ್ರಿಲ್ 2024, 4:57 IST
Last Updated 21 ಏಪ್ರಿಲ್ 2024, 4:57 IST
ಅಕ್ಷರ ಗಾತ್ರ

ದಾವಣಗೆರೆ: ಮೇ 7ರಂದು ನಡೆಯುವ ಮತದಾನದ ಪ್ರಯುಕ್ತ ಮತಗಟ್ಟೆ ಸಿಬ್ಬಂದಿಗೆ ಎರಡನೇ ಹಂತದ ತರಬೇತಿಗೆ ಹಾಜರಾಗಲು ಚುನಾವಣಾ ಸಾಮಾನ್ಯ ವೀಕ್ಷಕಿ ಎಂ.ಲಶ್ಮಿ ಅವರ ಸಮ್ಮುಖದಲ್ಲಿ ಶನಿವಾರ ಎರಡನೇ ರ‍್ಯಾಂಡಮೈಜೇಷನ್‌ ಅನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರು ಕೈಗೊಂಡರು.

ಈಗಾಗಲೇ ಮತಗಟ್ಟೆ ಮಟ್ಟದ ಅಧ್ಯಾಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿಗಳಿಗೆ ಆಯಾ ತಾಲ್ಲೂಕಿನಲ್ಲಿ ಮೊದಲ ಹಂತದ ತರಬೇತಿಯನ್ನು ನೀಡಲಾಗಿದೆ. ಎರಡನೇ ಹಂತದ ತರಬೇತಿಗೆ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ, ಮತಗಟ್ಟೆ ಸಿಬ್ಬಂದಿಯನ್ನು ವಿಧಾನಸಭಾ ಕ್ಷೇತ್ರವಾರು ಆಯ್ಕೆ ಮಾಡುವ ವಿಧಾನವೇ ಎರಡನೇ ಹಂತದ ರ‍್ಯಾಂಡಮೈಜೇಷನ್‌ ಆಗಿದೆ.

ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಅಧ್ಯಕ್ಷಾಧಿಕಾರಿಗಳನ್ನು ಒಂದು ವಿಧಾನಸಭಾ ಕ್ಷೇತ್ರದಿಂದ ಜಿಲ್ಲೆಯೊಳಗೆ ಇನ್ನೊಂದು ವಿಧಾನಸಭಾ ಕ್ಷೇತ್ರಕ್ಕೆ ನೇಮಕ ಮಾಡಲಾಗುತ್ತದೆ. ಎರಡನೇ ಹಂತದ ತರಬೇತಿಗೆ ನೇಮಕ ಮಾಡಲಾದ ವಿಧಾನಸಭಾ ಕ್ಷೇತ್ರಕ್ಕೆ ತೆರಳಿ ತಂಡದೊಂದಿಗೆ ತರಬೇತಿ ಪಡೆಯಬೇಕಾಗುತ್ತದೆ.

ಏಪ್ರಿಲ್ 30 ರಂದು ಎರಡನೇ ಹಂತದ ತರಬೇತಿ: ಎರಡನೇ ಹಂತದ ರ‍್ಯಾಂಡಮೈಜೇಷನ್‌ ನಡೆಸಲಾಗಿದ್ದು, ಎಲ್ಲಾ ಮತಗಟ್ಟೆ ಸಿಬ್ಬಂದಿಗಳಿಗೆ ಏ.30ರಂದು ಬೆಳಿಗ್ಗೆ 10ರಿಂದ ತರಬೇತಿಯನ್ನು ಆಯೋಜಿಸಲಾಗಿದೆ. ಈ ತರಬೇತಿಗೆ ಒಂದು ತಾಲ್ಲೂಕಿನಿಂದ ನೇಮಕವಾದ ತಾಲ್ಲೂಕಿಗೆ ತೆರಳಲು ಸಿಬ್ಬಂದಿಗೆ ಆಯಾ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದ ಬಳಿಯಿಂದ ಬೆಳಿಗ್ಗೆ 6ರಿಂದ ವಾಹನದ ವ್ಯವಸ್ಥೆ ಮಾಡಲಾಗಿದ್ದು, ನೇಮಕವಾದ ಎಲ್ಲಾ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ತರಬೇತಿಯಲ್ಲಿ ಭಾಗವಹಿಸಬೇಕು.

ಸಖಿ, ಯುವ, ವಿಕಲಚೇತನರ ಮತಗಟ್ಟೆ:

ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ 5 ಸಖಿ ಮತಗಟ್ಟೆಗಳನ್ನು ಮತ್ತು ಪ್ರತಿ ಕ್ಷೇತ್ರದಲ್ಲಿ ತಲಾ ಒಂದರಂತೆ ಯುವ, ವಿಶೇಷಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು ಇಲ್ಲಿ ನಿರ್ವಹಿಸುವ ಸಿಬ್ಬಂದಿ ನೇಮಕಾತಿ ರ‍್ಯಾಂಡಮೈಜೇಷನ್ ನೆರವೇರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT