ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ | ಮುಂಗಾರು ಕನವರಿಕೆಯಲ್ಲಿ ಅನ್ನದಾತ

Published : 19 ಜೂನ್ 2023, 5:17 IST
Last Updated : 19 ಜೂನ್ 2023, 5:17 IST
ಫಾಲೋ ಮಾಡಿ
Comments
ಪ್ರಸಕ್ತ ವರ್ಷ ಆರಂಭದಿಂದ ಜೂನ್‌ ಮಧ್ಯ ಭಾಗದವರೆಗೆ 149.7 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ, 82.1 ಮಿ.ಮೀ ಮಳೆಯಾಗಿದೆ. ಶೇ 45ರಷ್ಟು ಮಳೆ ಕೊರತೆ ಉಂಟಾಗಿದ್ದು, ಮುಂಗಾರು ಹಂಗಾಮು ಬಿತ್ತನೆ ಕುಂಠಿತಗೊಂಡಿದೆ. ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನ ಬಿತ್ತನೆ ಶೇ 0.46ರಷ್ಟು ಮಾತ್ರ ಪೂರ್ಣಗೊಂಡಿದೆ.
ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಜುಲೈವರೆಗೂ ಬಿತ್ತನೆ ಕಾರ್ಯ ಕೈಗೊಳ್ಳಲು ಸಮಯವಿದೆ. ಮಳೆ ಹಾಗೂ ಹದ ನೋಡಿಕೊಂಡು, ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. 
ಶ್ರೀನಿವಾಸ್ ಚಿಂತಾಲ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ, ದಾವಣಗೆರೆ
ಕಳೆದ ವರ್ಷ ಈ ವೇಳೆಗಾಗಲೇ ಮೆಕ್ಕೆಜೋಳ ಬಿತ್ತನೆ ಮಾಡಿ 25 ದಿನ ಕಳೆದಿದ್ದವು. ಮಳೆ ಚೆನ್ನಾಗಿ ಬಂದಿತ್ತು. ಈ ವರ್ಷ ಜಮೀನುಗಳನ್ನು ಸರಿಯಾಗಿ ಹದಮಾಡಲೂ ಮಳೆ ಬಂದಿಲ್ಲ. ಕೊಳವೆ ಬಾವಿ ನೀರು ಸಾಕಾಗುತ್ತಿಲ್ಲ.
ಮಲ್ಲಪ್ಪ, ರೈತ, ಜಿ.ಟಿ.ಕಟ್ಟೆ ಹರಿಹರ
ಕಳೆದ ವರ್ಷ ಜೂನ್ ತಿಂಗಳ ಹೊತ್ತಿಗೆ ಮುಂಗಾರು ಹಂಗಾಮಿನ ಬಿತ್ತನೇ ಕಾರ್ಯ ಮಾಡಿ ಒಂದು ತಿಂಗಳಾಗಿತ್ತು. ಆದರೆ ಈ ಬಾರಿ ಇನ್ನೂ ಮಳೆ ಬಿದ್ದಿಲ್ಲ. ವಾರದೊಳಗೆ ಮಳೆ ಬಾರದೆ ಹೋದರೆ ಮುಂಗಾರು ಹಂಗಾಮಿನ ಬಿತ್ತನೆ ಅವಧಿ ಮುಗಿಯಲಿದೆ.
ಸತೀಶ್ ,ರೈತ, ಕಾಕನೂರು ಗ್ರಾಮ ಚನ್ನಗಿರಿ
ಜೂನ್ ಆರಂಭದಲ್ಲಿಯೇ ಬಿತ್ತನೆ ಕಾರ್ಯ ಆರಂಭವಾಗಬೇಕಿತ್ತು. ಆದರೆ ಮಳೆಯಾಗದಿರುವುದರಿಂದ ಹೊಲಗಳನ್ನು ಸರಿಯಾಗಿ ಸಿದ್ಧತೆ ಮಾಡಿಕೊಳ್ಳಲು ಆಗುತ್ತಿಲ್ಲ. ಮಳೆ ಬಂದ ತಕ್ಷಣವೇ ಕೃಷಿ ಚಟುವಟಿಕೆಗಳನ್ನು ಆರಂಭಿಸುತ್ತೇವೆ.
ಮಧುಗೌಡ, ರೈತ, ಅರಕೆರೆ ಹೊನ್ನಾಳಿ ತಾಲ್ಲೂಕು
ಕಳೆದ ತಿಂಗಳು ಬಂದ ಅಲ್ಪ ಮಳೆಗೆ ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆ ಮಾಡಿದೆವು. ಈಗ 20 ದಿನಗಳಾದರೂ ಮಳೆ ಸುಳಿವಿಲ್ಲ. 10 ಎಕರೆಯಲ್ಲಿ ಮೊಳಕೆಯೊಡೆದ ಸಸಿಗಳು ಒಣಗಿವೆ.
ದ್ಯಾಮಮ್ಮ, ದೊಡ್ಡಬ್ಬಿಗೆರೆ, ಸಂತೇಬೆನ್ನೂರು ಹೋಬಳಿ
ಚನ್ನಗಿರಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಭೂಮಿಯನ್ನು ಉಳುಮೆ ಮಾಡಿಕೊಂಡಿರುವುದು
ಚನ್ನಗಿರಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಭೂಮಿಯನ್ನು ಉಳುಮೆ ಮಾಡಿಕೊಂಡಿರುವುದು
ಹೊನ್ನಾಳಿ ತಾಲ್ಲೂಕಿನ ಕುಂದೂರು ಭಾಗದಲ್ಲಿ ಬಿತ್ತನೆಗೆ ಭೂಮಿಯನ್ನು ಸಿದ್ಧಮಾಡಿಕೊಂಡಿರುವುದು
ಹೊನ್ನಾಳಿ ತಾಲ್ಲೂಕಿನ ಕುಂದೂರು ಭಾಗದಲ್ಲಿ ಬಿತ್ತನೆಗೆ ಭೂಮಿಯನ್ನು ಸಿದ್ಧಮಾಡಿಕೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT