ಮಂಗಳವಾರ, ಜನವರಿ 28, 2020
21 °C

ಮದುವೆಗಾಗಿ ಇಟ್ಟಿದ್ದ ಹಣ, ನಗದು ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಇಲ್ಲಿನ ಬೇತೂರು ರಸ್ತೆಯ ಕೊರಮರ ಕಾಲೊನಿಯ ರಮೇಶ್ ಅವರ ತಂಗಿಯ ಮದುವೆಗಾಗಿ ಮನೆಯಲ್ಲಿ ಇಟ್ಟಿದ್ದ ನಗದು ಹಾಗೂ ಚಿನ್ನದ ಆಭರಣಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

ರಮೇಶ್ ಅವರು ಕೊಪ್ಪಳ ಜಿಲ್ಲೆ ಹುಲಿಗಿ ಗ್ರಾಮದ ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಕಳ್ಳರು ಮನೆಯ ಮುಂಭಾಗದ ಗೇಟ್ ಹಾರಿ, ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾರೆ.

ಮನೆಯ ಒಳಗಡೆ ಬೀರುವಿನಲ್ಲಿದ್ದ ₹65 ಸಾವಿರ, 10 ಗ್ರಾಂ ತೂಕದ 2 ಜೊತೆ ಬೆಂಡೋಲೆ, 3 ಗ್ರಾಂ ತೂಕದ ಒಂದು ಜೊತೆ ಜುಮುಕಿ, 14 ಗ್ರಾಂ ತೂಕದ 3 ಜೊತೆ ಹ್ಯಾಂಗಿಗ್ಸ್, ಬಂಗಾರದ ಪುಡಿ ಸಾಮಾನುಗಳು ಸೇರಿ ₹ 65 ಸಾವಿರ ಮೌಲ್ಯದ ಆಭರಣವನ್ನು ದೋಚಿದ್ದಾರೆ.

ಆಜಾದ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು