ನಾಯಕನಹಟ್ಟಿ: ಇಲ್ಲಿನ ತಳಕು ಗ್ರಾಮದ ಬಸ್ ನಿಲ್ದಾಣ ಸಮೀಪ ಇರುವ ಅಂಗಡಿ ಮುಂಗಟ್ಟುಗಳಲ್ಲಿ ಶುಕ್ರವಾರ ರಾತ್ರಿ ಸರಣಿ ಕಳವು ನಡೆದಿದೆ.

ಎಂದಿನಂತೆ ವಿವಿಧ ಅಂಗಡಿಗಳ ಮಾಲೀಕರು ವ್ಯಾಪಾರ ವಹಿವಾಟು ಮುಗಿಸಿ, ಬೀಗ ಹಾಕಿಕೊಂಡು ರಾತ್ರಿ ಮನೆಗೆ ತೆರಳಿದ್ದಾರೆ. ಈ ವೇಳೆ ಖದೀಮರು ಅಂಗಡಿಗಳ ಬೀಗಮುರಿದು ಹಣ, ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.

ಸ್ನೇಹಜೀವಿ ಪ್ರಾವಿಷನ್ ಸ್ಟೋರ್, ಶಿವಸಂಕಲ್ಪ ಎಲೆಕ್ಟ್ರಾನಿಕ್ಸ್, ಸಿಗಂದೂರೇಶ್ವರಿ ಫರ್ಟಿಲೈಸರ್ಸ್ ಸೇರಿ ಒಟ್ಟು ಏಳು ಅಂಗಡಿಗಳಲ್ಲಿ ಕಳವು ನಡೆದಿದೆ. ಕಳ್ಳತನದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಶನಿವಾರ ಬೆಳಿಗ್ಗೆ ಈ ವಿಚಾರ ಗೊತ್ತಾಗಿದೆ. ಸ್ಥಳಕ್ಕೆ ಸಿಪಿಐ ಹನುಮಂತಪ್ಪ ಎಂ.ಶಿರೇಹಳ್ಳಿ, ಪಿಎಸ್ಐ ಜಿ.ಪಾಂಡುರಂಗ, ಚಿತ್ರದುರ್ಗದ ಬೆರಳಚ್ಚು ತಜ್ಞರು, ಶ್ವಾನದಳ ಸೇರಿ ಪರಿಣತರ ತಂಡ ಭೇಟಿ ನೀಡಿ ಪರಿಶೀಲಿಸಿದೆ. ತಳಕು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.