ದಾವಣಗೆರೆ: ಹರಳು ರೂಪದ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ರೈತರಿಂದ ಹರಳು ರೂಪದ ಗೊಬ್ಬರಕ್ಕೇ ಬೇಡಿಕೆ ಇರುವುದರಿಂದ ಕೊರತೆ ಕಂಡುಬರುತ್ತಿದೆ. ಅಂತೆಯೇ ಕೃಷಿ ಇಲಾಖೆ ದ್ರವ ರೂಪದ ಯೂರಿಯಾ ಬಳಸುವಂತೆ ಜಾಗೃತಿ ಮೂಡಿಸುತ್ತಿದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ನ್ಯಾನೋ ಯೂರಿಯಾ ಬಳಕೆಯ ಪ್ರಮಾಣ ಕ್ರಮೇಣ ಹೆಚ್ಚುತ್ತಿದೆ. ಪ್ರಸಕ್ತ ವರ್ಷ ಈಗಾಗಲೇ ತಲಾ 500 ಮಿ.ಲೀ.ನ 20,000 ಬಾಟಲುಗಳಷ್ಟು ನ್ಯಾನೋ ಯೂರಿಯಾವನ್ನು, ಅಂದಾಜು 10,000 ಎಕರೆ ಮೆಕ್ಕೆಜೋಳ ಬೆಳೆಗೆ ರೈತರು ಸಿಂಪಡಿಸಿದ್ದಾರೆ. ನ್ಯಾನೋ ಯೂರಿಯಾ ಸಿಂಪಡಣೆಗೆ ಕೃಷಿ ಕೂಲಿಕಾರರ ಜೊತೆಜೊತೆಗೇ ಡ್ರೋನ್ಗಳನ್ನೂ ಬಳಸಿಕೊಳ್ಳಲಾಗುತ್ತಿದೆ.

ದಾವಣಗೆರೆ ತಾಲ್ಲೂಕಿನ ಮಾಯಕೊಂಡ, ಆನಗೋಡು ಹಾಗೂ ಕಸಬಾ ಹೋಬಳಿಯಲ್ಲಿ ನಿತ್ಯವೂ 400ರಿಂದ 500 ಎಕರೆಯಲ್ಲಿ ಡ್ರೋನ್ ಮೂಲಕ ನ್ಯಾನೋ ಯೂರಿಯಾ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ.

ವೆಚ್ಚ ಕಡಿಮೆ:

ಇಫ್ಕೋ ಕಂಪನಿಯ 500 ಮಿ.ಲೀ. ಸಾಮರ್ಥ್ಯದ ದ್ರವ ರೂಪದ ನ್ಯಾನೋ ಯೂರಿಯಾ ಬೆಲೆ ₹225 ಇದೆ. ಒಂದು ಎಕರೆಗೆ ಒಂದು ಬಾಟಲು ಸಾಕಾಗುತ್ತದೆ. ಎಕರೆ ಬೆಳೆಗೆ ನ್ಯಾನೋ ದ್ರಾವಣ ಸಿಂಪಡಣೆಗೆ ಇದೇ ಕಂಪನಿಯವರು ಡ್ರೋನ್ ಪೂರೈಸಲು ₹ 400ರಿಂದ ₹ 450 ದರ ನಿಗದಿಪಡಿಸಿದ್ದಾರೆ. ಒಟ್ಟಾರೆ ₹ 650 ರಿಂದ ₹ 700 ವೆಚ್ಚದಲ್ಲಿ ಒಂದು ಎಕರೆ ಬೆಳೆಗೆ ಯೂರಿಯಾ ದ್ರಾವಣ ಸಿಂಪಡಣೆ ಕಾರ್ಯ ಪೂರ್ಣಗೊಳ್ಳುತ್ತದೆ.

45 ಕೆ.ಜಿ. ತೂಕದ ಹರಳು ರೂಪದ ಯೂರಿಯಾ ಚೀಲದ ದರ ₹ 268 ಇದೆ. ಕೊರತೆ ಸಂದರ್ಭ ಈ ದರ ಮಾರಾಟಗಾರರಿಂದಲೇ ದ್ವಿಗುಣಗೊಳ್ಳುವ ಸಾಧ್ಯತೆಯೂ ಇದೆ. ಮತ್ತೂ ಸಾಗಣೆ ವೆಚ್ಚವೂ ಪ್ರತ್ಯೇಕ. ಬೆಳೆಗಳಿಗೆ ಗೊಬ್ಬರ ಇಡಲು ₹ 400 ರಿಂದ ₹ 500ರಂತೆ ಇಬ್ಬರಿಗಾದರೂ ಕೂಲಿ ನೀಡಬೇಕು. ಇದರ ಒಟ್ಟಾರೆ ಖರ್ಚು ₹ 1,000ಕ್ಕೂ ಅಧಿಕ. ಹೀಗಾಗಿ ನ್ಯಾನೋ ಯೂರಿಯಾ ಸಿಂಪಡಣೆಯು ರೈತರಿಗೆ ಆರ್ಥಿಕವಾಗಿ ವರದಾನವಾಗಿದೆ. ಡ್ರೋನ್ ಮೂಲಕ ಕಾರ್ಯ ನಿರ್ವಹಿಸುವುದರಿಂದ ಸಮಯವೂ ಉಳಿತಾಯವಾಗುತ್ತದೆ. ಮಣ್ಣಿನ ಆರೋಗ್ಯವೂ ಹೆಚ್ಚುತ್ತದೆ. ಜಿಲ್ಲೆಯಲ್ಲಿ ನ್ಯಾನೋ ಯೂರಿಯಾ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

‘8 ದಿನಗಳ ಹಿಂದೆ 12 ಎಕರೆ ಮೆಕ್ಕೆಜೋಳ ಬೆಳೆಗೆ ಡ್ರೋನ್ ಬಳಸಿ ನ್ಯಾನೋ ದ್ರಾವಣವನ್ನು ಸಿಂಪಡಿಸಿದ್ದೆವು. ಇಫ್ಕೋ ಕಂಪನಿಯವರು ಎಕರೆಗೆ ₹ 400 ದರ ಪಡೆದಿದ್ದರು. ಬೆಳೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಉತ್ತಮ ಫಸಲನ್ನು ನಿರೀಕ್ಷಿಸಿದ್ದೇವೆ. ಹರಳು ಯೂರಿಯಾ ಭೂಮಿಗೆ ಬಿದ್ದು ವ್ಯರ್ಥವಾಗುತ್ತಿತ್ತು. ಆದರೆ, ಡ್ರೋನ್ ಬಳಸಿದ್ದರಿಂದ ಸ್ವಲ್ಪವೂ ವ್ಯರ್ಥವಾಗಿಲ್ಲ’ ಎನ್ನುತ್ತಾರೆ ಮಾಯಕೊಂಡದ ರೈತ ಶಶಿ ಪೂಜಾರ್.

ಆನಗೋಡು ಹೋಬಳಿ ವ್ಯಾಪ್ತಿಯ ಹೆಬ್ಬಾಳು ಮಠದ ಮಹಾಂತರುದ್ರ ಸ್ವಾಮೀಜಿ ಅವರು ಮಠಕ್ಕೆ ಸೇರಿದ 14 ಎಕರೆ ಮೆಕ್ಕೆಜೋಳ ಬೆಳೆಗೆ ನ್ಯಾನೋ ಯೂರಿಯಾ ದ್ರಾವಣವನ್ನು ಡ್ರೋನ್ ಮೂಲಕ ಸಿಂಪಡಿಸಿದ್ದಾರೆ.

‘ರೈತರು ನ್ಯಾನೋ ಯೂರಿಯಾ ಬಳಸುವುದರಿಂದ ಉತ್ತಮ ಫಸಲು ಪಡೆಯಬಹುದು. ಇದಕ್ಕಾಗಿ ಸರ್ಕಾರ ಪ್ರತೀ ಗ್ರಾಮ ಪಂಚಾಯಿತಿಗೂ ಡ್ರೋನ್ಗಳನ್ನು ಪೂರೈಸಬೇಕು’ ಎಂದು ಸ್ವಾಮೀಜಿ ಮನವಿ ಮಾಡಿದರು.

‘ಹರಳು ರೂಪದ ಯೂರಿಯಾದಲ್ಲಿ ಶೇ 46ರಷ್ಟು ಸಾರಜನಕ ಇರುತ್ತದೆ. ಆದರೆ, ಅದು ಭೂಮಿಗೆ ಸೇರಿ ನಂತರ ಗಿಡಕ್ಕೆ ಬರುತ್ತದೆ. ಆದರೆ, ನ್ಯಾನೋ ಯೂರಿಯಾದಲ್ಲಿ ಶೇ 4ರಷ್ಟು ಸಾರಜನಕ ಇದ್ದರೂ, ಅದು ನೇರವಾಗಿ ಗಿಡಗಳಿಗೆ ಸೇರುತ್ತದೆ. ಎಲೆಗಳಿಗೆ ನೇರವಾಗಿ ಸಾರಜನಕ ದೊರೆಯುವುದರಿಂದ ಉತ್ತಮ ಫಸಲು ನಿರೀಕ್ಷಿಸಬಹುದು’ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.