ಹೊನ್ನಾಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸ್ನಾನದ ಕೋಣೆಯ ಬಕೆಟ್ನಲ್ಲಿ ಮಂಗಳವಾರ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.

ಆಗತಾನೇ ಜನಿಸಿದ ಶಿಶುವನ್ನು ಹೊಕ್ಕಳು ಬಳ್ಳಿ ಸಮೇತ ಬಟ್ಟೆ ಸುತ್ತಿ ಬಕೆಟ್ನಲ್ಲಿ ಇಟ್ಟು ತಾಯಿ ನಾಪತ್ತೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆ ವಿವರ: ಮಂಗಳವಾರ ಬೆಳಿಗ್ಗೆ 9.40ರ ವೇಳೆಗೆ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ತ್ರಿವೇಣಮ್ಮ ಸ್ನಾನದ ಕೋಣೆಗೆ ಸ್ವಚ್ಛತೆಗೆಂದು ಹೋಗಿದ್ದರು. ಬಕೆಟ್ವೊಂದರಲ್ಲಿ ಶಬ್ಧ ಕೇಳಿದಂತಾಗಿ ಇಣುಕಿ ನೋಡಿದಾಗ ನವಜಾತ ಶಿಶು ಇರುವುದು ಪತ್ತೆಯಾಗಿದೆ. ತಕ್ಷಣ ಅವರು ತುರ್ತು ಚಿಕಿತ್ಸಾ ವಿಭಾಗದ ಶುಶ್ರೂಷೆ ಅಧಿಕಾರಿ ರಮ್ಯಾ ಅವರನ್ನು ಕರೆದುಕೊಂಡು ಹೋಗಿ ಪರಿಶೀಲಿಸಿ ಶಿಶುವನ್ನು ಹೆರಿಗೆ ವಿಭಾಗಕ್ಕೆ ದಾಖಲಿಸಿದ್ದಾರೆ. ನಂತರ ಹೊಕ್ಕಳು ಬಳ್ಳಿಗೆ ಕ್ಲಾಂಪ್ ಹಾಕಿ, ಶಿಶುವಿನ ಆರೈಕೆ ಮಾಡಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಚಂದ್ರಪ್ಪ ತಿಳಿಸಿದರು.

ಚಂದ್ರಪ್ಪ ಅವರು, ಸಿಡಿಪಿಒಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದು, ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ದಾವಣಗೆರೆ ಸರ್ಕಾರಿ ವಿಶೇಷ ದತ್ತುಕೇಂದ್ರಕ್ಕೆ ವರ್ಗಾವಣೆ: ‘ಮಗುವನ್ನು ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆ ಮಾಡಿಕೊಂಡು ಪೋಷಕರ ಪತ್ತೆಗೆ ದೂರು ನೀಡಲಾಗುವುದು’ ಎಂದು ದಾವಣಗೆರೆ ಸರ್ಕಾರಿ ವಿಶೇಷ ದತ್ತು ಕೇಂದ್ರದ ಅಧಿಕಾರಿ ಚಂದ್ರಶೇಖರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.