ಶುಕ್ರವಾರ, ಆಗಸ್ಟ್ 19, 2022
21 °C

ದಾವಣಗೆರೆ: ಬಾರದ ಪರಿಹಾರ, 4 ಬಸ್‌ಗಳ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದವರಿಗೆ ಬರಬೇಕಿದ್ದ ಪರಿಹಾರದ ಬಾಕಿ ಮೊತ್ತವನ್ನು ಪಾವತಿಸದ ಕಾರಣ ವಾಯವ್ಯ ಕರ್ನಾಟಕ ಸಾರಿಗೆಯ ಹಾವೇರಿ ಡಿಪೋದ 4 ಬಸ್‌ಗಳನ್ನು ನ್ಯಾಯಾಲಯದ ಆದೇಶದಂತೆ ನಗರದಲ್ಲಿ ಸೋಮವಾರ ವಶಕ್ಕೆ ಪಡೆಯಲಾಯಿತು.

ತುಮಕೂರು ಸಮೀಪದ ಟೋಲ್‌ಗೇಟ್ ಬಳಿ 2013ರ ನವೆಂಬರ್ 6ರಂದು ಬಸ್ ಡಿಕ್ಕಿಯಾಗಿ ಸಾಫ್ಟ್‌ವೇರ್ ಎಂಜಿನಿಯರ್ ಸಂಜೀವ್ ಎಂ. ಪಾಟೀಲ್ ಮೃತಪಟ್ಟಿದ್ದರು. ಪ್ರಕರಣದ ಬಗ್ಗೆ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ₹2.15 ಕೋಟಿ  ಪರಿಹಾರ ನೀಡುವಂತೆ ಆದೇಶ ನೀಡಲಾಗಿತ್ತು. ಆ ಮೊತ್ತವು 2017ರ ಹೊತ್ತಿಗೆ ಬಡ್ಡಿ ಸೇರಿ ₹2.82 ಕೋಟಿ ಆಗಿತ್ತು. ಈವರೆಗೆ ₹1.72 ಕೋಟಿಗಳನ್ನು ಸಂಸ್ಥೆ ಪಾವತಿಸಿದೆ. ಬಡ್ಡಿ ಸೇರಿ ಬಾಕಿ ಮೊತ್ತವನ್ನು ಪಾವತಿಸಬೇಕಾಗಿದೆ.

ನ್ಯಾಯಾಲಯದ ಅಮೀನರಾದ ಮಂಜುನಾಥ್, ರಾಜಕುಮಾರ್, ಗುರುಮೂರ್ತಿ, ವಕೀಲ ಎ.ಎಂ. ಹೆಗಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು