ದಾವಣಗೆರೆ: ‘ಸಂವಿಧಾನ ಹಾಗೂ ಘನತೆಗೆ ಧಕ್ಕೆಯಾದಾಗ ಹೇಡಿಗಳ ರೀತಿ ಹಿಂದೆ ಸರಿಯುವುದಲ್ಲ. ಹೋರಾಟ ಮನೋಭಾವದಿಂದ ಉತ್ತರ ನೀಡಿದರೆ ಮಾತ್ರ ದೇಶದಲ್ಲಿ ಬಹುತ್ವ ಉಳಿಸಿಕೊಳ್ಳಬಹುದು’ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಿಂದ ಶನಿವಾರ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ‘ತಲ್ಲಣಿಸದಿರು ಮನವೇ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಬಸವಣ್ಣನವರು ಮಾತಾಡುವುದನ್ನು ಕಲಿಯಿರಿ ಎಂದಿದ್ದರು. ಆದರೆ, ಇಂದು ಮಾತನಾಡುವುದೇ ಅಪಾಯಕಾರಿ ಎಂಬ ಸಂದರ್ಭ ಎದುರಾಗಿದೆ’ ಎಂದು ಹೇಳಿದರು.

‘ಜಾತಿ ಗೋಡೆಗಳನ್ನು ಕೆಡವಿ, ಒಬ್ಬರು ಮತ್ತೊಬ್ಬರನ್ನು ಅಪ್ಪಿಕೊಳ್ಳುವುದು, ಪ್ರೀತಿಸಬೇಕೆಂಬುದೇ ಸಂವಿಧಾನದ ಆಶಯ. ಸಂವಿಧಾನ ಕೇವಲ ಸ್ವಾತಂತ್ರ್ಯವನ್ನು ಮಾತ್ರ ಕೊಟ್ಟಿಲ್ಲ. ಹಕ್ಕು, ಜವಾಬ್ದಾರಿಗಳನ್ನೂ ಕೊಟ್ಟಿದೆ. ಆದರೆ, ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿರುವುದು ಸರಿಯಲ್ಲ’ ಎಂದರು.

‘ರಾಜಕೀಯದಲ್ಲಿ ತಲ್ಲಣ ಉಂಟಾಗಿದೆ. ಸಂವಿಧಾನ ಬದಲಿಸಿ, ಹೊಸ ಸಂವಿಧಾನ ತರಬೇಕೆಂಬ ಗುಂಪು ಒಂದೆಡೆಯಿದೆ. ಅಂಬೇಡ್ಕರ್ ಅವರು ಸಂವಿಧಾನದ ಆಶಯಗಳನ್ನು ಆಯಾ ಕಾಲಘಟ್ಟಕ್ಕೆ ಬದಲಿಸಬಹುದು ಎಂದಿದ್ದಾರೆಯೇ ಹೊರತು, ಸಂವಿಧಾನವನ್ನೇ ಬದಲಿಸಲು ಹೇಳಿಲ್ಲ. ಆದರೆ, ಸಂವಿಧಾನವನ್ನೇ ಸುಟ್ಟುಹಾಕುವ ರಾಜಕೀಯ ಪ್ರತಿನಿಧಿಗಳ ಗುಂಪು ಇರುವುದು ದುರಂತ’ ಎಂದು ವಿಷಾದಿಸಿದರು.

‘ಪ್ರಸ್ತುತ ಪ್ರಜಾಪ್ರಭುತ್ವವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳುವ ತಂತ್ರ ನಡೆಯುತ್ತಿದೆ. ದೇಶಭಕ್ತಿಯ ಹೆಸರಿನಲ್ಲಿ ವೈಯಕ್ತಿಕ ಹಿತಾಸಕ್ತಿ ಬೆಳೆಸಿಕೊಳ್ಳುವ ಹುನ್ನಾರ ಇದಾಗಿದೆ’ ಎಂದು ಸಾಹಿತಿ ರಾಮಲಿಂಗಪ್ಪ ಟಿ. ಬೇಗೂರು ದೂರಿದರು.

ಕಾಗಿನೆಲೆ ಮಹಾಸಂಸ್ಥಾನದ ನಿರಂಜನಾನಂದಪುರಿ ಸ್ವಾಮೀಜಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್, ಸಂಚಾಲಕ ಡಾ. ಮಂಜಪ್ಪ ಮಾಗೋಡಿ, ಕನಕ ನೌಕರರ ಬಳಗದ ಅಧ್ಯಕ್ಷ ಶಿವಾನಂದ ದಳವಾಯಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

‘ದೇವರು ಎಂದರೆ ಭಯಪಡಿಸುವುದಲ್ಲ’

‘ದೇವರು ಎಂದರೆ ಭಯಪಡಿಸುವುದು ಶಾಪ ನೀಡುವುದು ಅಲ್ಲ. ಕನಕರು ಆದಿಕೇಶವನ ಮೇಲೆ ನಂಬಿಕೆಯಿಟ್ಟು ಎಲ್ಲರನ್ನೂ ಸಲಹುತ್ತಾರೆ. ತಲ್ಲಣಿಸದಿರು ಮನವೇ ಎಂದು ಹೇಳಿದ್ದಾರೆ. ಆದರೆ ದೇವರ ಹೆಸರಲ್ಲಿಯೂ ಭಯಪಡಿಸುವವರಿದ್ದಾರೆ’ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು. ‘ಇಂದು ಸನಾತನ ಮತ್ತು ಸಂವಿಧಾನದ ನಡುವೆ ಸಂಘರ್ಷ ನಡೆಯುತ್ತಿದೆ. ಸನಾತನ ಅಂದರೆ ಪ್ರಾಚೀನತೆ ಎನ್ನುತ್ತಾರೆ. ಆದರೆ ಪವಿತ್ರತೆ ಅನ್ನುವುದು ಪ್ರಾಚೀನತೆಯಿಂದ ಬರುವುದಿಲ್ಲ’ ಎಂದು ಹೇಳಿದರು. ‘ಮನುಧರ್ಮ ಶಾಸ್ತ್ರದಲ್ಲಿ ಬ್ರಾಹ್ಮಣರು ಉಗ್ರ ಅಪರಾಧ ಮಾಡಿದರೂ ಶಿಕ್ಷೆಯ ಪ್ರಮಾಣ ಕಡಿಮೆಯಿದೆ. ಈಗಿನ ನ್ಯಾಯಾಧೀಶರೂ ಸೇರಿದಂತೆ ಕೆಲವರ ಮನಸ್ಸಲ್ಲಿ ಇಂತಹ ಕಸವೂ ತುಂಬಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.