ಹರಿಹರ: ನಾಲ್ಕು ದಿನಗಳಿಂದ ಸುರಿಯುತ್ತಿರುವ ಪುಷ್ಯ ಮಳೆಗೆ ತಾಲ್ಲೂಕಿನ ಭಾನುವಳ್ಳಿ-ಲಕ್ಕಶೆಟ್ಟಿಹಳ್ಳಿ ಗ್ರಾಮಗಳ ಮಧ್ಯದ ರಸ್ತೆಯ ಕಾಲುವೆ ಸೇತುವೆ ಮಂಗಳವಾರ ಕುಸಿದು ರೈತರು ಜಮೀನುಗಳಿಗೆ ತೆರಳಲು ಅಡಚಣೆ ಉಂಟಾಗಿದೆ.
ಈ ಎರಡೂ ಗ್ರಾಮಗಳ ಮಧ್ಯದ ರಸ್ತೆಗೆ ಕೂಡುವ ಜಮೀನುಗಳಿಗೆ ತೆರಳುವ ಅಡ್ಡರಸ್ತೆಯಲ್ಲಿ ದೇವರಬೆಳೆಕೆರೆ ಪಿಕ್‌ಅಪ್ ಚಾನಲ್ ಹಾದು ಹೋಗಿದೆ. ಈ ಚಾನಲ್ ಮೇಲೆ ನಿರ್ಮಿಸಿರುವ ಸೇತುವೆ ಕುಸಿದಿದೆ. ಮಂಗಳವಾರ ಬೆಳಗಿನ ಜಾವ ಸೇತುವೆ ಕುಸಿದಿರುವ ಸಾಧ್ಯತೆ ಇದ್ದು, ಯಾವುದೇ ಜೀವ ಹಾನಿಯಾಗಿಲ್ಲ.
ಮಾಹಿತಿ ತಿಳಿದ ಶಾಸಕ ಬಿ.ಪಿ. ಹರೀಶ್ ಅವರು ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.
ಸೇತುವೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಯಲವಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್.ಎನ್. ನಾಗರಾಜ, ಮುಖಂಡರಾದ ಗೌಡ್ರ ಪ್ರಕಾಶ್, ಸಾರಥಿ ಮುನೀಂದ್ರ, ಸುರೇಶ್ ಎನ್., ಶ್ಯಾಮನೂರು ಸಚಿನ್, ಎಂ.ಸಿ. ಗೂಳಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.