ದಾವಣಗೆರೆ: ಶೌಚಾಲಯ, ಸ್ನಾನಗೃಹ ತ್ಯಾಜ್ಯ ನಿರ್ವಹಣೆಗೆ ಅಭಿವೃದ್ಧಿಪಡಿಸಿದ ಒಳಚರಂಡಿ (ಯುಜಿಡಿ) ವ್ಯವಸ್ಥೆಗೆ ಸ್ಯಾನಿಟರಿ ಪ್ಯಾಡ್ ಹಾಗೂ ವೈದ್ಯಕೀಯ ತ್ಯಾಜ್ಯ ಕಂಟಕವಾಗುತ್ತಿವೆ. ಆಸ್ಪತ್ರೆಗಳ ನಿರ್ಲಕ್ಷ್ಯ, ಜನರಲ್ಲಿನ ಅರಿವಿನ ಕೊರತೆಯಿಂದಾಗಿ ಒಳಚರಂಡಿ ಸಮಸ್ಯೆ ದಿನಕಳೆದಂತೆ ಬಿಗಡಾಯಿಸುತ್ತಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 1,200 ಕಿ.ಮೀ. ಒಳಚರಂಡಿ ವ್ಯವಸ್ಥೆ ಇದೆ. ನಿತ್ಯ 6 ಕೋಟಿ ಲೀಟರ್ (60 ಎಂಎಲ್ಡಿ) ತ್ಯಾಜ್ಯ ಸೃಷ್ಟಿಯಾಗುತ್ತದೆ. ಒಳಚರಂಡಿ ನಿರ್ವಹಣೆ ಮಹಾನಗರ ಪಾಲಿಕೆಗೆ ಸವಾಲಾಗಿದ್ದು, ನಿತ್ಯ ಸರಾಸರಿ 50 ದೂರುಗಳು ದಾಖಲಾಗುತ್ತಿವೆ.

ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಮಹಾನಗರ ಪಾಲಿಕೆ ಇದರ ನಿರ್ವಹಣೆಯ ಹೊಣೆ ನಿಭಾಯಿಸುತ್ತಿದೆ. 5 ಜಟ್ಟಿಂಗ್ ಯಂತ್ರ, 2 ಸಕ್ಕಿಂಗ್ ಯಂತ್ರ ಹಾಗೂ 2 ಡೀ ಸಿಲ್ಟಿಂಗ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ನಿತ್ಯ ದಾಖಲಾಗುವ ದೂರುಗಳಲ್ಲಿ ಸ್ಯಾನಿಟರಿ ಪ್ಯಾಡ್ ಹಾಗೂ ವೈದ್ಯಕೀಯ ತ್ಯಾಜ್ಯದಿಂದ ಸೃಷ್ಟಿಯಾದ ಸಮಸ್ಯೆಗಳೇ ಹೆಚ್ಚು.

‘ಬಳಸಿದ ಸ್ಯಾನಿಟರಿ ಪ್ಯಾಡ್ಗಳನ್ನು ಕಸದೊಂದಿಗೆ ಪ್ರತ್ಯೇಕವಾಗಿ ನೀಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಆದರೂ, ಅನೇಕರು ಶೌಚಾಲಯಗಳಿಗೆ ಹಾಕುವುದನ್ನು ಬಿಟ್ಟಿಲ್ಲ. ಮನೆಯಿಂದ ಕೊಂಚ ದೂರ ಸಾಗುವ ಪ್ಯಾಡ್ಗಳು ನೀರು ಹೀರಿಕೊಂಡು ಹಿಗ್ಗುತ್ತವೆ. 9 ಇಂಚಿನ ಕೊಳವೆ ಮಾರ್ಗದಲ್ಲಿ 4 ಇಂಚಿನ ಸ್ಥಳವನ್ನು ಆಕ್ರಮಿಸಿಕೊಂಡಾಗ ಒಳಚರಂಡಿ ಕಟ್ಟಿಕೊಳ್ಳುತ್ತದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಹಾಗೂ ಕಾಲೇಜುಗಳ ಸುತ್ತಲಿನ ಒಳಚರಂಡಿ ಸಮಸ್ಯೆಗೆ ಸ್ಯಾನಿಟರಿ ಪ್ಯಾಡ್ಗಳ ಕೊಡುಗೆ ಹೆಚ್ಚಾಗಿದೆ ಎಂಬುದನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಗುರುತಿಸಿದ್ದಾರೆ. ‘ಪ್ರತಿಷ್ಠಿತ’ ಬಡಾವಣೆಗಳಲ್ಲಿನ ಒಳಚರಂಡಿಯಲ್ಲಿ ಕೂಡ ಇಂತಹ ಪ್ಯಾಡ್ಗಳು ಪತ್ತೆಯಾಗಿವೆ. ಮ್ಯಾನ್ಹೋಲ್ ಚೇಂಬರ್ಗಳಲ್ಲಿ ಈ ಪ್ಯಾಡ್ಗಳು ಹೆಚ್ಚಾಗಿ ಲಭ್ಯವಾಗಿವೆ.

ಆಸ್ಪತ್ರೆ, ಕ್ಲಿನಿಕ್, ನರ್ಸಿಂಗ್ ಹೋಮ್ಗಳು ಹೆಚ್ಚಾಗಿರುವ ಬಡಾವಣೆಗಳಲ್ಲಿ ವೈದ್ಯಕೀಯ ತ್ಯಾಜ್ಯ ಒಳಚರಂಡಿ ಸೇರುತ್ತಿದೆ. ಅಪಾಯಕಾರಿ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಮಹಾನಗರ ಪಾಲಿಕೆ ಪ್ರತ್ಯೇಕ ವ್ಯವಸ್ಥೆ ರೂಪಿಸಿದೆ. ಈ ತ್ಯಾಜ್ಯವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುವಂತಿಲ್ಲ. ಆದರೆ ಇವುಗಳನ್ನು ಶೌಚಾಲಯದ ಮೂಲಕ ಒಳಚರಂಡಿಗೆ ಹಾಕಲಾಗುತ್ತಿದೆ. ಪಿ.ಜೆ. ಬಡಾವಣೆ, ಗುಂಡಿ ವೃತ್ತ, ಎಂಸಿಸಿ ಬಡಾವಣೆಯ ಒಳಚರಂಡಿಯಲ್ಲಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳು ಪತ್ತೆಯಾಗಿವೆ.

‘ತ್ಯಾಜ್ಯ ನೀರು ನಿರ್ವಹಣೆಗೆ ಮಾತ್ರ ಅಭಿವೃದ್ಧಿಪಡಿಸಿದ ಒಳಚರಂಡಿಗೆ ಸಾರ್ವಜನಿಕರು ಮಳೆನೀರು ಹರಿಸುತ್ತಿದ್ದಾರೆ. ಮನೆಯ ಮಹಡಿಯ ಮೇಲೆ ಬಿದ್ದ ನೀರನ್ನು ಚೇಂಬರ್ ಮೂಲಕ ಒಳಚರಂಡಿಗೆ ಬಿಡುತ್ತಿದ್ದಾರೆ. ಮಳೆ ಸುರಿದಾಗ ಒಳಚರಂಡಿಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಮ್ಯಾನ್ಹೋಲ್ಗಳ ಮೂಲಕ ತ್ಯಾಜ್ಯ ಹೊರಬರುತ್ತದೆ. ಮಳೆನೀರು ಸಂಪರ್ಕ ಕಲ್ಪಿಸದಂತೆ ಜನರಿಗೆ ಸೂಚಿಸಿದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಹೊಸ ಬಡಾವಣೆಯಲ್ಲಿ ಲೋಪ

ಹೊಸ ಬಡಾವಣೆ ಅಭಿವೃದ್ಧಿಪಡಿಸುವಾಗ ಒಳಚರಂಡಿ ವ್ಯವಸ್ಥೆ ನಿರ್ಮಿಸುವುದು ಕಡ್ಡಾಯ. ಬಡಾವಣೆ ನಿರ್ಮಿಸಿದವರೇ ಈ ಹೊಣೆಯನ್ನು ನಿರ್ವಹಿಸಬೇಕಿದೆ. ಹಲವು ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ವೈಜ್ಞಾನಿಕವಾಗಿಲ್ಲ. ಇದರಿಂದ ಸಮಸ್ಯೆಗಳು ಬಗಡಾಯಿಸುತ್ತಿವೆ. ‘ಹೊಸದಾಗಿ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ಕನಿಷ್ಠ 9 ಇಂಚಿನ ಪೈಪ್ಗಳನ್ನು ಅಳವಡಿಸಬೇಕು. ಮುಖ್ಯ ಕೊಳವೆ ಮಾರ್ಗದ ಗಾತ್ರ ಇನ್ನೂ ದೊಡ್ಡದಿರಬೇಕು. ನೀರು ತ್ಯಾಜ್ಯ ಸರಾಗವಾಗಿ ಹರಿದುಹೋಗುವಂತೆ ವೈಜ್ಞಾನಿಕವಾಗಿ ವಿನ್ಯಾಸ ಮಾಡಬೇಕು. ಆದರೆ ಬಹುತೇಕ ಬಡಾವಣೆಗಳಲ್ಲಿ 4 ಇಂಚಿನ ಪೈಪ್ಗಳನ್ನು ಅಳವಡಿಸಲಾಗಿದೆ. ಕೆಲವೇ ವರ್ಷಗಳಲ್ಲಿ ಒಳಚರಂಡಿಯ ಮೇಲೆ ಹೆಚ್ಚು ಒತ್ತಡ ಬಿದ್ದು ಸಮಸ್ಯೆ ಸೃಷ್ಟಿಯಾಗುತ್ತದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.