ಧರ್ಮಪುರ: ‘ರತ್ನಾಕರ ಎನ್ನುವ ದರೋಡೆಕೋರ ವಾಲ್ಮೀಕಿಯಾದಂತೆ ತಪ್ಪು ಮಾಡುವ ಮನುಷ್ಯ ಸನ್ಮಾರ್ಗಕ್ಕೆ ಬರಲು ಹಲವು ದಾರಿಗಳಿವೆ. ತಪ್ಪು ತಿದ್ದಿ ನಡೆಯಬೇಕು. ಸಮಾಜದಲ್ಲಿ ಸಂಸ್ಕಾರ ಬೆಳೆಸಿಕೊಳ್ಳಬೇಕು’ ಎಂದು ಚಿತ್ರದುರ್ಗದ ರಾಮಕೃಷ್ಣ, ಸ್ವಾಮಿ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಬ್ರಹ್ಮ ನಿಷ್ಟಾನಂದ ತಿಳಿಸಿದರು.

ಸಮೀಪದ ಮದ್ದಿಹಳ್ಳಿಯಲ್ಲಿ ಸ್ವಾಮಿ ವಿವೇಕಾನಂದ ಸೇವಾ ಹಾಗೂ ಶೈಕ್ಷಣಿಕ ಟ್ರಸ್ಟ್ ವತಿಯಿಂದ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಮನೆ ಮನೆಗೆ ಶ್ರೀಮಾತೆ ಶಾರದಾದೇವಿ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಮಕೃಷ್ಣ, ಸ್ವಾಮಿ ವಿವೇಕಾನಂದ ಮತ್ತು ಶಾರದಾ ದೇವಿಯವರ ಜೀವನ ಆದರ್ಶಗಳನ್ನು ಯುವಕರು ತಿಳಿದುಕೊಳ್ಳಬೇಕು. ಅರಿಷಡ್ವರ್ಗಗಳನ್ನು ಮಿತ್ರರನ್ನಾಗಿ ಮಾಡಿಕೊಂಡು ಸನ್ಮಾರ್ಗದ ಕಡೆ ಹೋಗಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು’ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಬುಡೇನ್ ಸಾಬ್, ಜಾಕೀರ್ ಹುಸೇನ್, ಸ್ವಾಮಿ ವಿವೇಕಾನಂದ ಟ್ರಸ್ಟ್ನ ಅಧ್ಯಕ್ಷ ಪರಮೇಶ್ವರ, ಶಿವಕುಮಾರ್, ನಾಗರಾಜ, ಜಗನ್ನಾಥ್, ಬೋಜರಾಜ, ಸಿದ್ದಪ್ಪ, ಮಂಜು, ಕೆಂಚಮ್ಮ, ಗೌರಮ್ಮ, ಮಹಾದೇವಮ್ಮ, ಪವಿತ್ರಾ, ರಮ್ಯಾ, ರಘು, ದರ್ಶನ್ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.