ದಾವಣಗೆರೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ 2028ರವರೆಗೆ ಮುಖ್ಯಮಂತ್ರಿ ಆಗಿರುತ್ತಾರೆ. ಈ ಅವಧಿಯನ್ನು ಅವರು ಪೂರ್ಣಗೊಳಿಸಲಿದ್ದಾರೆ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.

‘2028ರವರೆಗೆ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಬದಲಾವಣೆ ಮಾಡಬೇಕಾದರೆ ರಾಜ್ಯದಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಈ ಕುರಿತು ತೀರ್ಮಾನ ಕೈಗೊಳ್ಳುವ ಶಕ್ತಿ ಹೈಕಮಾಂಡ್ಗೆ ಮಾತ್ರ ಇದೆ. 50 ವರ್ಷ ರಾಜಕಾರಣದಲ್ಲಿ ಇರುವ ಸಿದ್ದರಾಮಯ್ಯ ನಿಜಕ್ಕೂ ಜನನಾಯಕ’ ಎಂದು ಜಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಿದ್ದರಾಮಯ್ಯ ಅವರು 5 ವರ್ಷದ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಅರ್ಧಕ್ಕೆ ಕೆಳಗೆ ಇಳಿಯುತ್ತಾರೆ ಎಂಬುದು ಊಹಾಪೋಹ. ರಾಜ್ಯದ ಅತಿ ದೀರ್ಘಾವಧಿಯ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದು ಹಿಂದುಳಿದ ವರ್ಗಗಳಿಗೆ ಹೆಮ್ಮೆಯ ಸಂಗತಿ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.