ಭಾನುವಾರ, ಮಾರ್ಚ್ 29, 2020
19 °C

ಕೊಟ್ಟೂರು ಜಾತ್ರೆಗೆ ವಿಶೇಷ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಫೆ. 18ರಂದು ನಡೆಯಲಿರುವ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಕೊಟ್ಟೂರು ಗುರುಬಸವೇಶ್ವರ ರಥೋತ್ಸವ ಅಂಗವಾಗಿ ದಾವಣಗೆರೆ– ಹೊಸಪೇಟೆ ಮಾರ್ಗದಲ್ಲಿ ಫೆ. 16ರಿಂದ 19ರ ವರೆಗೆ ವಿಶೇಷ ರೈಲು ಸೌಲಭ್ಯ ಕಲ್ಪಿಸಲಾಗಿದೆ.

ಕೊಟ್ಟೂರು ಜಾತ್ರೆ ಅಂಗವಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸುವಂತೆ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರಿಗೆ ಮನವಿ ಸಲ್ಲಿಸಿದ್ದರು. ‌ಬೇಡಿಕೆಗೆ ಸ್ಪಂದಿಸಿರುವ ಸುರೇಶ್‌ ಅಂಗಡಿ ರೈಲು ಓಡಿಸುವಂತೆ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದ್ದರು.

ವಿಶೇಷ ಪ್ಯಾಸೆಂಜರ್ ರೈಲು (ಸಂಖ್ಯೆ 06231/06232) ದಾವಣಗೆರೆ–ಹೊಸಪೇಟೆ–ದಾವಣಗೆರೆ ಮಾರ್ಗದಲ್ಲಿ ನಾಲ್ಕು ದಿನಗಳು ಸಂಚರಿಸಲಿವೆ.

ರೈಲು ಸಂಖ್ಯೆ – 06231 ದಾವಣಗೆರೆ–ಹೊಸಪೇಟೆ ಪ್ಯಾಸೆಂಜರ್ ರೈಲು ನಾಲ್ಕು ದಿನಗಳು ದಾವಣಗೆರೆಯಿಂದ ಬೆಳಿಗ್ಗೆ 9.30ಕ್ಕೆ ಹೊರಟು ಮಧ್ಯಾಹ್ನ 2.45 ಕ್ಕೆ ಹೊಸಪೇಟೆ ತಲುಪಲಿದೆ. 

ರೈಲು ಅಮರಾವತಿ ಕಾಲೊನಿ, ತೆಲಿಗಿ, ಹರಪನಹಳ್ಳಿ, ಬೆಣ್ಣೆಹಳ್ಳಿ, ಕೊಟ್ಟೂರು, ಮಾಲವಿ, ಹಗರಿ ಬೊಮ್ಮನಹಳ್ಳಿ, ಹಂಪಪಟ್ಟಣಂ, ಮರಿಯಮ್ಮನಹಳ್ಳಿ, ವ್ಯಾಸ ಕಾಲೊನಿ, ವ್ಯಾಸಂಕೇರಿ, ತುಂಗಭದ್ರಾ ಅಣೆಕಟ್ಟು ಮಾರ್ಗದಲ್ಲಿ ಸಂಚರಿಸಲಿದೆ.

ಇದೇ ಮಾರ್ಗದಲ್ಲಿ ಹೊಸಪೇಟೆ-ದಾವಣಗೆರೆ ರೈಲು ಸಂಖ್ಯೆ –06232 ಹೊಸಪೇಟೆಯಿಂದ ಮಧ್ಯಾಹ್ನ 2.30ಕ್ಕೆ ಹೊರಟು ರಾತ್ರಿ 8.40ಕ್ಕೆ ದಾವಣಗೆರೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು