ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ರಕ್ಷಣೆಗೆ ಮುಂದಾದ ಪೊಲೀಸರ ಮೇಲೆ ಕಲ್ಲು

ನಾಲ್ವರು ಮಹಿಳಾ ಇನ್‌ಸ್ಪೆಕ್ಟರ್‌ಗಳಿಗೆ ಗಾಯ
Last Updated 27 ಜೂನ್ 2022, 5:19 IST
ಅಕ್ಷರ ಗಾತ್ರ

ದಾವಣಗೆರೆ: ಕಸಾಯಿಖಾನೆಗಳಿಗೆ ಜಾನುವಾರನ್ನು ದೂಡುತ್ತಿದ್ದಾಗ ರಕ್ಷಣೆಗೆ ತೆರಳಿದ ಪೊಲೀಸರ ಮೇಲೆ ಕಲ್ಲು ತೂರಿದ ಘಟನೆ ಇಲ್ಲಿನ ಬಾಷಾ ನಗರದಲ್ಲಿ ಶನಿವಾರ ರಾತ್ರಿ ಸಂಭವಿಸಿದ್ದು, ಈ ಸಂದರ್ಭ ನಾಲ್ವರು ಮಹಿಳಾ ಇನ್‌ಸ್ಪೆಕ್ಟರ್‌ಗಳಿಗೆ ಗಾಯಗಳಾಗಿವೆ.

ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರ ತಂಡ ಜಾನುವಾರು ರಕ್ಷಿಸಲು ಮುಂದಾದಾಗ ಅಡ್ಡಿಪಡಿಸಿದ ಸ್ಥಳೀಯರು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ವಾಹನವೂ ಜಖಂಗೊಂಡಿದೆ.

ಜಾನುವಾರು ರಕ್ಷಣೆ ಮಾಡಿ ಸಾಗಿಸಲು ಪೊಲೀಸರು ಕೊಂಡೊಯ್ದಿದ್ದ ಲಾರಿಯೊಳಗೆ ಅನೇಕರು ನುಗ್ಗಲೆತ್ನಿಸಿದರು. ಸ್ಥಳದಲ್ಲಿ ನೂರಾರು ಜನ ಜಮಾಯಿದ್ದರಿಂದ ಉದ್ರಿಕ್ತ ವಾತಾವರಣ ಕಂಡುಬಂತು. ಆದರೂ 26 ಜಾನುವಾರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಾಷಾ ನಗರದಲ್ಲಿ 30ಕ್ಕೂ ಹೆಚ್ಚು ಕಸಾಯಿಖಾನೆಗಳಿವೆ. ಕಲ್ಲು ತೂರಿದ ಸ್ಥಳೀಯರೊಂದಿಗೆ ಮಾತನಾಡಿ ತಿಳಿ ಹೇಳಲಾಗಿದೆ’ ಎಂದು ಜಾನುವಾರು ರಕ್ಷಣೆಗೆ ತೆರಳಿದ್ದ ಪೊಲೀಸ್‌ ತಂಡದ ನೇತೃತ್ವವಹಿಸಿದ್ದ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT