ಮಂಗಳವಾರ, ಆಗಸ್ಟ್ 4, 2020
24 °C

ದಾವಣಗೆರೆ ಮೇಯರ್ ವಿರುದ್ಧ ದೂರು ದಾಖಲಿಸಿದ ತಹಶೀಲ್ದಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಲಾಕ್‌ಡೌನ್ ನಡುವೆಯೂ ಮಾಸ್ಕ್ ಇಲ್ಲದೇ, ಅಂತರ ಕಾಯ್ದುಕೊಳ್ಳದೇ ಜನ್ಮದಿನ ಆಚರಿಸಿಕೊಂಡ ಮೇಯರ್ ಬಿ.ಜಿ. ಅಜಯಕುಮಾರ್ ಅವರ ವಿರುದ್ಧ ತಹಶೀಲ್ದಾರ್ ಎನ್‌.ಬಿ.ಗಿರೀಶ್ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.

ಜಿಲ್ಲಾಧಿಕಾರಿ ಕರ್ಫ್ಯೂ ಆದೇಶ ಹೊರಡಿಸಿದ್ದರೂ ಜನರನ್ನು ಗುಂಪುಗೂಡಿಸಿಕೊಂಡು ಜನ್ಮದಿನ ಆಚರಿಸುವ ಮೂಲಕ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ್ದರು. ನಾನು ಜಾಗಕ್ಕೆ ಭೇಟಿ ನೀಡಿದಾಗ ಯಾವುದೇ ಕುರುಹು ಸಿಕ್ಕಿಲ್ಲ. ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದನ್ನು ವೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ’ ಎಂದು ತಹಶೀಲ್ದಾರ್ ಎನ್‌.ಬಿ.ಗಿರೀಶ್ ತಿಳಿಸಿದ್ದಾರೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು