ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸ್ವೆಹಳ್ಳಿ: ಶಿಥಿಲಾವಸ್ಥೆ ತಲುಪಿದ ಉರ್ದು ಶಾಲೆ!

ಅಪಾಯದ ಮುನ್ಸೂಚನೆ ಅರಿತು ಕೊಠಡಿ ಹೊರಗೆ ಪಾಠ
Last Updated 6 ಸೆಪ್ಟೆಂಬರ್ 2022, 4:22 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಇಲ್ಲಿನ ಸರ್ಕಾರಿ ಉರ್ದು ಶಾಲೆಯ ಕೊಠಡಿಗಳು, ಗೋಡೆಗಳು ಮತ್ತು ಚಾವಣಿ ಶಿಥಿಲಗೊಂಡಿದ್ದು, ಯಾವುದೇ ಸಂದರ್ಭ ನೆಲಕ್ಕುರುಳಬಹುದಾದ ಅಪಾಯದ ಮುನ್ಸೂಚನೆ ದೊರೆತಿದೆ. ಅಂತೆಯೇ ವಿದ್ಯಾರ್ಥಿಗಳನ್ನು ಕೊಠಡಿಯ ಹೊರಗೆ ಕೂರಿಸಿ ಪಾಠ ಹೇಳುವ ಅನಿವಾರ್ಯತೆ ಎದುರಾಗಿದೆ.

ಕಳೆದ ಶನಿವಾರ ರಾತ್ರಿ ಕೊಠಡಿಯ ಮುಂಭಾಗದ ಗೊಡೆ ಮತ್ತು ಚಾವಣಿ ಕುಸಿದು ಬಿದ್ದಿವೆ. ‘ರಾತ್ರಿ ಸಮಯದಲ್ಲಿ ಘಟನೆ ಕುಸಿದಿದ್ದರಿಂದ ಅನಾಹುತ ಸಂಭವಿಸಿಲ್ಲ. ಶಾಲೆ ನಡೆಯುತ್ತಿದ್ದಾಗ ಘಟನೆ ನಡೆದಿದ್ದರೆ ಅನಾಹುತ ಆಗುವ ಸಂಭವವಿತ್ತು’ ಎಂದು ಶಿಕ್ಷಕರು ತಿಳಿಸಿದರು.

‘ಶಾಲೆಯಲ್ಲಿ ಒಟ್ಟು 11 ಕೊಠಡಿಗಳಿವೆ. ಇದರಲ್ಲಿ ಪ್ರೌಢಶಾಲೆಯ 3 ಕೊಠಡಿಗಳು, ಕಚೇರಿಯ ಒಂದು ಕೊಠಡಿ ಇದೆ. ಇವು ಸುಸ್ಥಿತಿಯಲ್ಲಿವೆ. ಪ್ರಾಥಮಿಕ ಶಾಲಾ ವಿಭಾಗದ 7 ಕೊಠಡಿಗಳಿದ್ದು, 2 ಕೊಠಡಿಗಳು ಸುಸ್ಥಿತಿಯಲ್ಲಿವೆ. ಉಳಿದ 5 ಕೊಠಡಿಗಳು ಶಿಥಿಲಗೊಂಡಿವೆ. ಶಾಲೆಯಲ್ಲಿ 173 ವಿದ್ಯಾರ್ಥಿಗಳು ಇದ್ದಾರೆ. ಈ ಕುರಿತು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಕೊಠಡಿಯ ಹೊರಗಡೆಯೇ ಬೋಧನೆ ಮಾಡುತ್ತಿದ್ದೇವೆ’ ಎಂದು ಮುಖ್ಯಶಿಕ್ಷಕಿ ತಬ್ರುನ್ನಿಸಾ ವಿವರಿಸಿದರು.

‘ಶಾಲೆಗೆ ಶಿಕ್ಷಣ ಇಲಾಖೆಯ ಅನುದಾನದಲ್ಲಿ ಎರಡು ಕೊಠಡಿಗಳು ಮುಂಜೂರಾಗಿವೆ. ರಾಷ್ಟ್ರಿಯ ಶಿಕ್ಷಣ ಯೋಜನೆ ಅಡಿ ಇನ್ನೆರಡು ಕೊಠಡಿಗಳು ಸೇರಿ ಒಟ್ಟು 4 ಕೊಠಡಿಗಳು ಮುಂಜೂರಾಗಿವೆ. ಶಿಥಿಲಗೊಂಡ ಕೊಠಡಿಗಳನ್ನು ಶೀಘ್ರವೇ ನೆಲಸಮ ಮಾಡಿ, ಹೊಸ ಕಟ್ಟಡ ನಿರ್ಮಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಸ್ವಾಮಿಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT