ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ | ದಂಡಾಸ್ತ್ರದ ಭಯ: ಬಣ್ಣ ಬಳಕೆಗೆ ಬಿದ್ದಿದೆ ಕಡಿವಾಣ

Published : 29 ಜುಲೈ 2024, 7:16 IST
Last Updated : 29 ಜುಲೈ 2024, 7:16 IST
ಫಾಲೋ ಮಾಡಿ
Comments
ಕೃತಕ ಬಣ್ಣವಿಲ್ಲದ ಕಾಟನ್‌ ಕ್ಯಾಂಡಿ ಮಾರುತ್ತಿರುವ ವ್ಯಾಪಾರಿ 
ಕೃತಕ ಬಣ್ಣವಿಲ್ಲದ ಕಾಟನ್‌ ಕ್ಯಾಂಡಿ ಮಾರುತ್ತಿರುವ ವ್ಯಾಪಾರಿ 
ಸರ್ಕಾರದ ಆದೇಶವಿದ್ದರೂ ಕೆಲವೆಡೆ ಅದರ ಕಟ್ಟುನಿಟ್ಟಿನ ಪಾಲನೆಯಾಗುತ್ತಿಲ್ಲ. ಇದರಿಂದ ಆಹಾರ ಪ್ರಿಯರು ಆರೋಗ್ಯ ಸಮಸ್ಯೆಗೆ ಗುರಿಯಾಗುವಂತಾಗಿದೆ.
ಆಂಜನೇಯ ಹರಿಹರ ನಿವಾಸಿ
ಸರ್ಕಾರದ ಆದೇಶ ಹೊರಬಿದ್ದ ದಿನದಿಂದಲೇ ಕೃತಕ ಬಣ್ಣ ಬಳಸುವುದನ್ನು ನಿಲ್ಲಿಸಿದ್ದೇವೆ.
ರಮೇಶ್‌ ಗೋಬಿ ಮಂಚೂರಿ ವ್ಯಾಪಾರಿ ಹರಿಹರ 
ಈಗ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. 16 ತಳ್ಳುಗಾಡಿಗಳ ಮೇಲೆ ದಾಳಿ ಮಾಡಿದ್ದೇವೆ. ಈ ಪೈಕಿ ಕಾನೂನು ಉಲ್ಲಂಘನೆಯ ಒಂದೂ ಪ್ರಕರಣ ಪತ್ತೆಯಾಗಿಲ್ಲ.
ಪರಮೇಶ್‌ ನಾಯ್ಕ ಆರೋಗ್ಯ ನಿರೀಕ್ಷಕ ಹೊನ್ನಾಳಿ 
ಜಾಗೃತಿಯ ಫಲವಾಗಿ ಪಟ್ಟಣದ ವ್ಯಾಪಾರಿಗಳ ಮನೋಧೋರಣೆ ಬದಲಾಗಿದೆ. ನಾವು ನಿರಂತರವಾಗಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದೇವೆ.
ಶಿವರುದ್ರಪ್ಪ ಚನ್ನಗಿರಿ ಪುರಸಭೆ ಆರೋಗ್ಯ ನಿರೀಕ್ಷಕ
ಎಲ್ಲೆಡೆ ಜಾಗೃತಿ.. ತಪ್ಪಿದರೆ ದಂಡ...
ನಿಷೇಧಿತ ಬಣ್ಣ ಬಳಸಿದಲ್ಲಿ ಪರವಾನಗಿಯನ್ನೇ ರದ್ದು ಮಾಡುತ್ತೇವೆ’ ಎಂದು ಜಿಲ್ಲಾ ಅಂಕಿತ ಅಧಿಕಾರಿ ಡಾ.ನಾಗರಾಜ್‌ ಹೇಳಿದರು. ‘ತಳ್ಳು ಗಾಡಿಯವರಿಗೆ ₹ 500ರಿಂದ ₹ 5000 ಹೋಟೆಲ್‌ನವರಿಗೆ ₹ 5000 ದಿಂದ ₹ 25000ದವರೆಗೂ ದಂಡ ವಿಧಿಸಲು ಅವಕಾಶ ಇದೆ. ಈವರೆಗೂ ₹ 6000 ದಂಡ ವಸೂಲಿ ಮಾಡಿದ್ದೇವೆ. 14 ಜನರಿಗೆ ನೋಟಿಸ್‌ ಕೊಟ್ಟಿದ್ದೇವೆ. ಸ್ಥಳೀಯ ಆಡಳಿತಗಳ ಸಹಯೋಗದಲ್ಲಿ ದಾವಣಗೆರೆಯಲ್ಲಿ 65 ಹರಿಹರದಲ್ಲಿ 18 ಹೊನ್ನಾಳಿಯಲ್ಲಿ 16 ಚನ್ನಗಿರಿಯಲ್ಲಿ 48 ಹಾಗೂ ಜಗಳೂರಿನಲ್ಲಿ 11 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ’ ಎಂದು ಮಾಹಿತಿ ನೀಡಿದರು. 
ನಿಯಮ ಮೀರಿದರೆ ಶಿಕ್ಷೆ ಏನು?
ಆದೇಶ ಉಲ್ಲಂಘನೆಯ ಪ್ರಕರಣಗಳು ಕಂಡುಬಂದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006ರ ನಿಯಮ 59ರ ಅಡಿಯಲ್ಲಿ 7 ವರ್ಷದಿಂದ ಜೀವಾವಧಿವರೆಗೆ ಜೈಲು ಶಿಕ್ಷೆ ಹಾಗೂ ₹10 ಲಕ್ಷಗಳವರೆಗೂ ದಂಡ ವಿಧಿಸಲು ಅವಕಾಶ ಇದೆ.  ಮಕ್ಕಳ ಮೇಲೆ ಹೆಚ್ಚು ಪರಿಣಾಮ ಕೃತಕ ಬಣ್ಣಗಳಿಂದ ತಯಾರಿಸುವ ಆಹಾರ ಪದಾರ್ಥಗಳ ಸೇವನೆಯಿಂದ ಮಕ್ಕಳ ಮೇಲೆ ಹೆಚ್ಚು ದುಷ್ಪರಿಣಾಮ ಉಂಟಾಗುತ್ತದೆ. ಮಕ್ಕಳಲ್ಲಿ ಆಕ್ರಮಣಕಾರಿ ನಡವಳಿಕೆ ಕಂಡುಬರುತ್ತದೆ. ಅಲರ್ಜಿ ಚರ್ಮದ ಮೇಲೆ ದದ್ದುಗಳು ಏಳುವುದು ಕಂಡುಬರುತ್ತದೆ. ಅಸ್ತಮಾ ಹಾಗೂ ಅಲರ್ಜಿ ಸಮಸ್ಯೆ ಎದುರಿಸುತ್ತಿರುವವರ ಆರೋಗ್ಯ ಇನ್ನಷ್ಟು ಹದಗೆಡುವ ಅಪಾಯ ಇರುತ್ತದೆ.
ಏನಿದು ‘ರೋಡಮೈನ್‌ ಬಿ’?
‘ರೋಡಮೈನ್‌ ಬಿ’ ರಾಸಾಯನಿಕವು ಹಸಿರು ಬಣ್ಣದ ಪುಡಿಯ ರೂಪದಲ್ಲಿ ಇರುತ್ತದೆ. ಇದನ್ನು ನೀರಿಗೆ ಬೆರೆಸಿದಾಗ ಗುಲಾಬಿ ವರ್ಣಕ್ಕೆ ತಿರುಗುತ್ತದೆ. ಇದು ಮೂತ್ರಪಿಂಡ ಯಕೃತ್‌ಗೆ ಹಾನಿ ಮಾಡುವ ಜೊತೆಗೆ ಹೊಟ್ಟೆಯಲ್ಲಿ ಗಡ್ಡೆಯ ಬೆಳವಣಿಗೆಗೂ ಕಾರಣವಾಗಲಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಮೆದುಳಿನ ಸೆರೆಬೆಲ್ಯೂಮ್‌ ಅಂಗಾಂಶಕ್ಕೆ ಹಾನಿಯಾಗುವ ಅಪಾಯವೂ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT