ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಆಡಿಯೊದಲ್ಲಿರುವ ಧ್ವನಿ ನಮ್ಮದಲ್ಲ: ಜಿ.ಎಂ.ಸಿದ್ದೇಶ್ವರ ಸ್ಪಷ್ಟನೆ

Published 8 ಜೂನ್ 2024, 0:02 IST
Last Updated 8 ಜೂನ್ 2024, 0:02 IST
ಅಕ್ಷರ ಗಾತ್ರ

ದಾವಣಗೆರೆ: ‘ನಮ್ಮ ಹೆಸರಿನಲ್ಲಿ ಹರಿದಾಡಿರುವ ಆಡಿಯೊದಲ್ಲಿರುವ ಧ್ವನಿ ನಮ್ಮದಲ್ಲ. ನಮ್ಮ ಹೆಸರಿನಲ್ಲಿ ವಿರೋಧಿಗಳು ನಕಲಿ ಆಡಿಯೊವನ್ನು ಸಾಮಾಜಿಕ ಮಾಧ್ಯಮಗಳಿಗೆ ಹಂಚಿದ್ದಾರೆ’ ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಸ್ಪಷ್ಟನೆ ನೀಡಿದ್ದಾರೆ.

‘ಆಡಿಯೊದಲ್ಲಿರುವಂತೆ ನಾನು ಹಾಗೂ ನನ್ನ ಪುತ್ರ ಜಿ.ಎಸ್. ಅನಿತ್‌ಕುಮಾರ್ ಅವರು ಮಾತನಾಡಿದ್ದೇವೆ ಎನ್ನುವುದೆಲ್ಲ ಸುಳ್ಳು. ನನ್ನ ಪುತ್ರ ಕಾರ್ಯಕರ್ತನ ಜೊತೆ ಮಾತನಾಡುವಾಗ ಪಕ್ಷದಿಂದ ಚುನಾವಣೆಗೆ ಹಣ ಬಂದಿಲ್ಲ ಎಂದು ಹೇಳಿರುವುದು ಸತ್ಯಕ್ಕೆ ದೂರ’ ಎಂದು ಹೇಳಿದರು.

‘ಚುನಾವಣೆಗೆ ಪಕ್ಷದಿಂದಲೂ ಹಣ ಕೇಳಿಲ್ಲ. ಪಕ್ಷವೂ ನಮಗೆ ಹಣ ಕೊಟ್ಟಿಲ್ಲ. ನಾವು ಯಾರಿಗೂ ಹಣ ಹಂಚಿಲ್ಲ. ₹ 500 ಕೊಟ್ಟಿದ್ರೆ ಗೆಲ್ಲುತ್ತಿದ್ರಿ ಎಂದು ಕಾರ್ಯಕರ್ತ ಹೇಳಿರುವುದು ಸುಳ್ಳು. ನಾವು ಪಕ್ಷಕ್ಕೆ ನಿಷ್ಠರಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನ ಹಾಗೂ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳಿಂದಲೇ ಕ್ಷೇತ್ರದಲ್ಲಿ 6 ಲಕ್ಷಕ್ಕೂ ಹೆಚ್ಚು ಮತಗಳು ಬಂದಿವೆ. ನಮ್ಮ ವಿರೋಧಿಗಳು ಬೇಕಂತಲೇ ನಕಲಿ ಆಡಿಯೊ ಮಾಡಿ ನನ್ನ ತೇಜೋವಧೆಗೆ ಯತ್ನಿಸಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT