ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೋಗಲೂರು | ಬಿಡದ ಕುಡಿಯುವ ನೀರು: ಪ್ರತಿಭಟನೆ

Published 25 ಮಾರ್ಚ್ 2024, 14:06 IST
Last Updated 25 ಮಾರ್ಚ್ 2024, 14:06 IST
ಅಕ್ಷರ ಗಾತ್ರ

ಹಿರೇಕೋಗಲೂರು (ಸಂತೇಬೆನ್ನೂರು): ಇಲ್ಲಿನ ಎ.ಡಿ ಹಾಗೂ ಎಸ್.ಟಿ. ಕಾಲೊನಿಯಲ್ಲಿ ಎರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹಲವು ಬಾರಿ ಅಲವತ್ತುಕೊಂಡರೂ ನೀರು ಬಿಡುತ್ತಿಲ್ಲ ಎಂದು ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿ, ಗ್ರಾಮ ಪಂಚಾಯಿತಿಗೆ ತೆರಳಿ ಪಿಡಿಒಗೆ ಮನವಿ ಸಲ್ಲಿಸಿದರು.

ಬೀದಿ ನಲ್ಲಿಗಳನ್ನೇ ಆಶ್ರಯಿಸಿ ನೀರು ತುಂಬಿಸಿಕೊಳ್ಳುವ ನಿವಾಸಿಗಳಿಗೆ ತೀವ್ರ ತೊಂದರೆ ಆಗಿದೆ. ಮನೆ ನಲ್ಲಿ ಹೊಂದಿರುವವರಿಗೆ ಸಾಕಷ್ಟು ನೀರು ಸಿಗುತ್ತಿದೆ. ತಕ್ಷಣ ನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋಬಳಿ ಅಧ್ಯಕ್ಷ ಎನ್.ಆರ್. ಕುಮಾರ್ ಹಾಗೂ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT