ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ

7

ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ

Published:
Updated:
Deccan Herald

ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಬುಧವಾರ ತಾಲ್ಲೂಕು ನಿಧಿಗೆ ಹೋಬಳಿ ವ್ಯಾಪ್ತಿಯ ದುಮ್ಮಳ್ಳಿ , ಮಲವಗೊಪ್ಪ ಮತ್ತು ನಿಧಿಗೆ ಗ್ರಾಮಗಳಲ್ಲಿ  ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ನಡೆಸಿದರು.

ಸ್ಥಳೀಯ ರೈತರಿಗೆ ಸುಧಾರಿತ ಸಮೀಕ್ಷೆಯ ವಿಧಾನ, ಮಹತ್ವ ಮತ್ತು ಫಲಿತಾಂಶಗಳ ಮಾಹಿತಿ‌ ನೀಡಿದರು.

ಎಲ್ಲಾ ರೈತರು ಸರ್ಕಾರದ ಆದೇಶದಂತೆ ಮುಂಗಾರು ಬೆಳೆಗಳ ವಿಧ ಹಾಗೂ ವಿಸ್ತೀರ್ಣಗಳನ್ನು ಕಡ್ಡಾಯವಾಗಿ ಮೊಬೈಲ್ ಆ್ಯಪ್‌ನಲ್ಲಿ ನಮೂದಿಸಬೇಕು ಹಾಗೂ ಸ್ಥಳಿಯವಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಸೂಚಿಸಿದರು.

ಸರ್ಕಾರದ ಕಂದಾಯ ಇಲಾಖೆ ಕಳೆದ ವರ್ಷದಿಂದ ರೈತರು ಬೆಳೆದ ಬೆಳೆ ಪಹಣಿಯಲ್ಲಿ ಇಂಡೀಕರಿಸಲು ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ತಂತ್ರಾಂಶ ಬಳಕೆಗೆ ತಂದಿದ್ದು , ಈ ಆ್ಯಪ್ ಮೂಲಕ ಸ್ಥಳೀಯ ಮಾಹಿತಿ ಹೊಂದಿರುವ ಯುವಕ, ಯುವತಿಯರು ಜಮೀನಿಗೆ ಭೇಟಿ ನೀಡಿ ವಾಸ್ತವ ಮಾಹಿತಿಯೊಂದಿಗೆ ಬೆಳೆ ನಮೂದು ಮಾಡುತ್ತಾರೆ. ಕಂದಾಯ ಇಲಾಖೆಯ ಸರ್ಕಾರಿ ಸಿಬ್ಬಂದಿ ಮೇಲ್ವಿಚಾರಣೆ ನಡೆಸಿ ಬೆಳೆ ಮಾಹಿತಿ ಪಹಣಿಯಲ್ಲಿ ಇಂಡೀಕರಿಸಲು ಕ್ರಮ ವಹಿಸಿರುತ್ತಾರೆ ಎಂದರು.

ಬೆಳೆ ಸಮೀಕ್ಷೆ ಮತ್ತು ಇಂಡೀಕರಣ ಮಾಡುವುದರಿಂದ ರೈತರು ತಮ್ಮ ಜಮೀನಿನ ಕ್ರಯ, ಅಡಮಾನ ಮಾಡಲು ಸರ್ಕಾರದ ಅಂಕಿ–ಅಂಶ ಸಂಗ್ರಹಣೆ , ಬೆಳೆ ಹಾನಿ ಪರಿಹಾರ ನಿರ್ಧರಣೆ, ಬೆಳೆ ವಿಮೆ ವಿತರಣೆ ಕಾರ್ಯನಿರ್ವಹಣೆಗೆ ಅನುಕೂಲವಾಗಿದೆ ಎಂದು ವಿವರ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ, ತಹಶೀಲ್ದಾರ್‌ ಸತ್ಯನಾರಾಯಣ, ಉಪ ತಹಶೀಲ್ದಾರ್ ಪ್ರದೀಪ್ ಆರ್. ನಿಕ್ಕಂ ಉಪಸ್ಥಿತಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !