ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಪಾಠದ ಜೊತೆ ಭವಿಷ್ಯಕ್ಕೆ ದಾರಿದೀಪ

Last Updated 24 ಮೇ 2014, 6:29 IST
ಅಕ್ಷರ ಗಾತ್ರ

ಹುಬ್ಬಳ್ಳಿ:ಎಸ್‌ಎಸ್‌ಎಲ್‌ಸಿ ಮುಗಿದಿದೆ. ವಿದ್ಯಾರ್ಥಿಗಳು ಮತ್ತು ಪಾಲಕರ ಗಮನ ಕಾಲೇಜಿನ ಕಡೆ ನೆಟ್ಟಿದೆ. ಇದೇ ಸಂದರ್ಭದಲ್ಲಿ ಗೊಂದಲವೂ ಅವರನ್ನು ಕಾಡತೊಡಗಿದೆ. ಕಣ್ಣ ಮುಂದೆ ನೂರಾರು ಕಾಲೇಜುಗಳು, ಹತ್ತು ಹಲವು ಕೋರ್ಸ್‌ಗಳು. ಎಲ್ಲ ಕಡೆಯೂ ಪರ್ಸೆಂಟೇಜ್‌ ಲೆಕ್ಕಾಚಾರ...

ಇಂಥ ಪರಿಸ್ಥಿತಿಯಲ್ಲಿ ವಿಜ್ಞಾನ ಮತ್ತು ಕಲಾ ವಿಷಯಗಳ ಮಧ್ಯದಲ್ಲಿ ಯಾವುದೇ ಗೊಂದಲವಿಲ್ಲದೆ ಕಲಿಯಬಹುದಾದ ವಿಷಯ ವಾಣಿಜ್ಯ. ಚಾರ್ಟರ್ಡ್‌ ಅಕೌಂಟೆಂಟ್‌ (ಸಿಎ), ಕಂಪೆನಿ ಸೆಕ್ರೆಟರಿ (ಸಿಎಸ್‌) ಮುಂತಾದ ಹುದ್ದೆಗಳನ್ನು ಅಲಂಕರಿಸಲು ನೆರವಾಗುವ ವಾಣಿಜ್ಯ ವಿಷಯ ಕಲಿಯಲು ಹುಬ್ಬಳ್ಳಿಯಲ್ಲಿ ಅನೇಕ ಕಾಲೇಜುಗಳಿವೆ. ವಾಣಿಜ್ಯ ‘ಲೆಕ್ಕಾಚಾರ’ದ ಜೊತೆಯಲ್ಲಿ ಭವಿಷ್ಯ ಭದ್ರಗೊಳಿಸುವ ಸಿಎ ಮತ್ತು ಸಿಎಸ್‌ ತರಬೇತಿಗೆ ಅಡಿಪಾಯ ಕೂಡ ಪಿಯು ಕಾಲೇಜುಗಳಲ್ಲಿ ಸಿಗುತ್ತಿರುವುದು ಇತ್ತೀಚಿನ ವಿಶೇಷ. ಸಿಪಿಟಿ (ಕಾಮನ್‌ ಪ್ರೊಫೀಷಿಯೆನ್ಸಿ ಟೆಸ್ಟ್‌), ಐಪಿಸಿಸಿ (ಇಂಟೆಗ್ರೇಟೆಡ್‌ ಪ್ರೊಫೀಷಿಯೆವಿಕ್ರಂ ಕಾಂತಿಕೆರೆನ್ಸಿ ಕಾಂಪಿಟೆನ್ಸಿ ಕೋರ್ಸ್‌) ಈಗ ಹುಬ್ಬಳ್ಳಿಯಲ್ಲೂ ಲಭ್ಯವಿದೆ.

ಪಿಯುಸಿ ಮತ್ತು ಸಿಪಿಟಿ, ಪಿಯುಸಿ ಮತ್ತು ಸಿಎಸ್‌ ಫೌಂಢೇಷನ್‌ (ಸಿಎಸ್‌ಎಫ್‌), ಪಿಯುಸಿ, ಸಿಪಿಟಿ ಮತ್ತು ಸಿಎಸ್‌ಎಫ್‌... ಹೀಗೆ ಸಾಗುತ್ತಿದೆ ಈಗ ವಾಣಿಜ್ಯ ಕಾಲೇಜುಗಳು ಒದಗಿಸುವ ಕೋರ್ಸ್‌ಗಳ ವಿವರ. ನಗರದ ಬಹುತೇಕ ಎಲ್ಲ ವಾಣಿಜ್ಯ ಕಾಲೇಜುಗಳಲ್ಲೂ ಪಿಯುಸಿ ತರಗತಿಗಳ ಜೊತೆಯಲ್ಲಿ ಸಿಪಿಟಿಯನ್ನು ಹೆಚ್ಚುವರಿಯಾಗಿ ಕಲಿಸಲಾಗುತ್ತದೆ. ಸಿಪಿಟಿಗೆ ಮಾತ್ರ ವಿಶೇಷ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವ ಕಾಲೇಜುಗಳು ಕೂಡ ಇವೆ.

ವಿದ್ಯಾನಗರದ ಜೆ.ಜಿ. ವಾಣಿಜ್ಯ ಕಾಲೇಜು, ಘಂಟಿಕೇರಿಯ ನೆಹರೂ ಕಾಲೇಜು, ಕುಸುಗಲ್‌ ರಸ್ತೆಯ ಆಕ್ಸ್‌ಫರ್ಡ್‌ ಕಾಲೇಜು, ನೆಹರೂ

[object Object]

ಮೈದಾನ ಸಮೀಪದ ಎಸ್‌ಜೆಎಂವಿ ಮಹಿಳಾ ಕಾಲೇಜು, ಸಂತೋಷ ನಗರದ ಜೆ.ಕೆ. ಕಾಲೇಜು, ಚೇತನಾ ಕಾಲೇಜು ಸಮೀಪದ ಐಬಿಎಂಆರ್‌ ಕಾಲೇಜು, ವಿದ್ಯಾನಗರದ ಶಾರದಾ ಆದರ್ಶ ಕಾಲೇಜು ಮುಂತಾದ ಕಡೆಗಳಲ್ಲಿ ಪಿಯುಸಿಯಲ್ಲಿ ವಾಣಿಜ್ಯ ವಿಷಯವನ್ನು ಕಲಿಸಲಾಗುತ್ತಿದ್ದು ವಿದ್ಯಾನಗರದ ಉತ್ತರಾದಿ ಮಠದ ಸಮೀಪ ಇರುವ ಚಾಣಕ್ಯ ಕಾಲೇಜಿನಲ್ಲಿ ಪಿಯುಸಿ ಜೊತೆಯಲ್ಲಿ ಸಿಪಿಟಿ, ಸಿಎ, ಸಿಎಸ್‌ ಮುಂತಾದ ಕೋರ್ಸ್‌ಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ‘ಐಪಿಸಿಸಿ ಇರುವ ಉತ್ತರ ಕರ್ನಾಟಕದ ಏಕೈಕ ಸಂಸ್ಥೆ ಇದು’ ಎಂಬುದು ಸಂಸ್ಥೆಯ ಆಡಳಿತ ಮಂಡಳಿಯವ ಅಭಿಪ್ರಾಯ.

ವಾಣಿಜ್ಯ ವಿಷಯ ಕಲಿಯುವ ಆಸಕ್ತರಿಗೆ ಬಹತೇಕ ಎಲ್ಲ ಕಾಲೇಜುಗಳಲ್ಲೂ ಹಾಸ್ಟೆಲ್‌ ಸೌಲಭ್ಯ ಇದೆ. ಕೆಲವರು ಸಮೀಪದಲ್ಲಿ ಪೇಯಿಂಗ್‌ ಗೆಸ್ಟ್‌ ನಡೆಸುವವರ ಜೊತೆ ಒಪ್ಪಂದ ಮಾಡಿಕೊಂಡಿದ್ದು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಆದ್ಯತೆ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಹೊರಗಿನಿಂದ ಬರುವ ವಿದ್ಯಾರ್ಥಿಗಳಿಗೂ ಇಲ್ಲಿ ವಾಣಿಜ್ಯ ವಿಷಯ ಕಲಿಯಲು ಹೆಚ್ಚು ಅಡೆ ತಡೆಗಳಿಲ್ಲ.

ಇಲ್ಲಿ ವೃತ್ತಿ ತರಬೇತಿ ಎಲ್ಲರಿಗೂ ಉಚಿತ
ಆಕ್ಸ್‌ಫರ್ಡ್ ಕಾಲೇಜಿನಲ್ಲಿ ಕೇಂದ್ರ ಸರ್ಕಾರ ಪ್ರಾಯೋಜಿತ ವೃತ್ತಿ ತರಬೇತಿ ನೀಡಲಾಗುತ್ತದೆ. ಫ್ಯಾಷನ್‌ ಡಿಸೈನಿಂಗ್‌ ಮತ್ತಿತರ ಕೋರ್ಸ್‌ಗಳ ಜೊತೆಗೆ ವಾಣಿಜ್ಯ ವಿಷಯ ಆಸಕ್ತರಿಗೆ ಟ್ಯಾಲಿ ಕೂಡ ಕಲಿಸಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪಾಸಾದವರು ಇಲ್ಲಿ ಉಚಿತವಾಗಿ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಬೇರೆ ಕಾಲೇಜಿನಲ್ಲಿ ಓದುತ್ತಿರುವವರು ಕೂಡ ಇಲ್ಲಿ ತರಬೇತಿಗೆ ಸೇರಿಕೊಳ್ಳಬಹುದಾಗಿದೆ.

ಉಚಿತ ಪುಸ್ತಕ
ಆಕ್ಸ್‌ಫರ್ಡ್‌ ಕಾಲೇಜಿನಲ್ಲಿ ಪಠ್ಯ ಪುಸ್ತಕಗಳನ್ನು ಗ್ರಂಥಾಲಯದ ಮೂಲಕ ಒದಗಿಸಲಾಗುತ್ತದೆ. ಕಾಲೇಜಿಗೆ ಸೇರಿಕೊಂಡಾಗ ಪುಸ್ತಕಗಳನ್ನು ಪಡೆದುಕೊಂಡು ಪರೀಕ್ಷೆಗಳು ಮುಗಿದ ನಂತರ ವಾಪಸ್‌ ನೀಡಬಹುದಾಗಿದೆ

ಶುಲ್ಕ ಎಲ್ಲಿ ಎಷ್ಟು?
ಜೆ.ಜಿ. ಕಾಲೇಜು: ಪಿಯುಸಿ–₨ 8ರಿಂದ 10,000; ಸಿಪಿಟಿ–₨ 6,000
ಚಾಣಕ್ಯ ಕಾಲೇಜು: ಪಿಯುಸಿ–ಸಿಪಿಟಿಗೆ ವಾರ್ಷಿಕ ₨ 20,000

ಚಾಣಕ್ಯ ಕಾಲೇಜು
ಸಿಎ ಅಥವಾ ಸಿಎಸ್‌ ಕನಸು ಕಾಣವವರಿಗೆ ಪ್ರಾಥಮಿಕ ತರಬೇತಿ ಸಿಗುವ ಕೇಂದ್ರವಾಗಿ ಚಾಣಕ್ಯ ಕಾಲೇಜು ಗುರುತಿಸಿಕೊಂಡಿದೆ. ಪಿಯುಸಿ ಕಲಿಯುವವರು ಎಂ.ಕಾಂ ಪದವೀಧರರಿಂದ ಸಿಎ ಪರೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದ ಕಾಲವೊಂದಿತ್ತು. ಈ ಪ್ರವೃತ್ತಿ ಕ್ರಮೇಣ ಬದಲಾಯಿತು. ಕಾಲೇಜುಗಳಲ್ಲೇ ಸಿಪಿಟಿ ತರಬೇತಿ ಒದಗಿಸಲು ಆರಂಭಿಸಿದರು. ಈ ಸಂದರ್ಭದಲ್ಲಿ ವಾಣಿಜ್ಯ ವಿಷಯದಲ್ಲಿ ಭವಿಷ್ಯ ರೂಪಿಸುವವರಿಗಾಗಿ ಸಮಗ್ರ ತರಬೇತಿ ನೀಡಲು ಆರಂಭಗೊಂಡ ಸಂಸ್ಥೆ ಚಾಣಕ್ಯ ಕಾಲೇಜು.

ಈ ಕಾಲೇಜಿನಲ್ಲಿ ಪಿಯುಸಿಗೆ ಸೇರುವವರಿಗೆ ಸಿಪಿಟಿ ಉಚಿತವಾಗಿ ಸಿಗುತ್ತದೆ. ಪಿಯುಸಿ ಮುಗಿದ ನಂತರ ಒಂಬತ್ತು ತಿಂಗಳ ಐಪಿಸಿಸಿ ಕೋರ್ಸ್‌ ಇದೆ. ಇದನ್ನು ಯಶಸ್ವಿಯಾಗಿ ಪೂರೈಸಿದರೆ ‘ಅಕೌಂಟೆಂಟ್‌ ಟೆಕ್ನಿಷಿಯನ್‌’ ಆಗಿ ಉದ್ಯೋಗಕ್ಕೆ ಸೇರಿಕೊಳ್ಳಬಹುದಾಗಿದೆ. ಸಿಪಿಟಿ, ಐಪಿಸಿಸಿ ಮುಗಿದ ನಂತರ ಸಿಎ ಫೈನಲ್‌ ಕೋರ್ಸ್‌ ಮಾಡಬಹುದಾಗಿದೆ. ಸಿಎ ಮಾಡಿದವರು ಯಾರೂ ಸುಮ್ಮನೆ ಕುಳಿತುಕೊಳ್ಳುವ ಪ್ರಯೇಯ ಇಲ್ಲ ಎಂಬುದು ಈ ಕೋರ್ಸ್‌ಗಳ ಕಡೆಗೆ ಯುವಕರು ಆಕರ್ಷಿತರಾಗಲು ಪ್ರಮುಖ ಕಾರಣ.

[object Object]

ಜೆ.ಜಿ. ಕಾಲೇಜಿನಲ್ಲೂ ಸಿಪಿಟಿ
ಜೆ.ಜಿ. ವಾಣಿಜ್ಯ ಕಾಲೇಜಿನಲ್ಲೂ ಪಿಯುಸಿ ಜೊತೆಯಲ್ಲಿ ಸಿಪಿಟಿ ತರಬೇತಿ ನೀಡಲಾಗುತ್ತದೆ. ಪಿಯುಸಿ ತರಗತಿ ಮುಗಿದ ನಂತರ ಸಂಜೆ ವೇಳೆ ಈ ತರಬೇತಿ ಲಭ್ಯವಿದ್ದು ಇದಕ್ಕೆ ಪ್ರತ್ಯೇಕ ಶುಲ್ಕ ತೆರಬೇಕಾಗುತ್ತದೆ. ಐಬಿಎಂಆರ್‌ನಲ್ಲಿ ಸಿಪಿಟಿ ಜೊತೆಯಲ್ಲಿ ಟ್ಯಾಲಿಯನ್ನು ಹೆಚ್ಚುವರಿಯಾಗಿ ಕಲಿಸಲಾಗುತ್ತದೆ. ಆಕ್ಸ್‌ಫರ್ಡ್ ಕಾಲೇಜಿನವರು ಸಿಪಿಟಿ ಮತ್ತು ಸಿಎಸ್‌ ತರಬೇತಿಗಾಗಿ ಸಿಎ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದು ಪಿಯುಸಿ ಜೊತೆಯಲ್ಲಿ ಇದು ಲಭ್ಯವಿದೆ.

ಎಸ್‌ಜೆಎಂವಿ ಮಹಿಳಾ ಕಾಲೇಜು ಸಿಪಿಟಿ ತರಬೇತಿ ಬದಲಿಗೆ ವೃತ್ತಿ ಮಾರ್ಗದರ್ಶನ ಮತ್ತು ಇಂಗ್ಲಿಷ್‌ ಕಲಿಕೆಗೆ ಒತ್ತು ನೀಡುತ್ತಿದೆ. ಇಂಗ್ಲಿಷ್‌ ಭಾಷೆಯನ್ನು ಶಾಸ್ತ್ರೀಯವಾಗಿ ಕಲಿಯಲು ಇಲ್ಲಿ ವಿಶೇಷ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಲ್ಲಿ ಆದ್ಯತೆ ನೀಡಲಾಗುತ್ತಿದೆ.

ಪಿಜಿಗಳೇ ವಿದ್ಯಾರ್ಥಿ ನಿಲಯಗಳು
ಹುಬ್ಬಳ್ಳಿಯ ಹೆಚ್ಚಿನ ವಾಣಿಜ್ಯ ಕಾಲೇಜುಗಳಲ್ಲಿ ವಿದ್ಯಾರ್ಥಿ ನಿಲಯಗಳಿಲ್ಲ. ಆದರೆ ಸಮೀಪದಲ್ಲಿ ಪೇಯಿಂಗ್‌ ಗೆಸ್ಟ್‌ ನಡೆಸುವವರು ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಾರೆ. ಕಾಲೇಜುಗಳು ಇವರೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದರಿಂದ ಅವಕಾಶಕ್ಕಾಗಿ ಪರದಾಡಬೇಕಾಗಿಲ್ಲ.

ಜೆ.ಜಿ. ವಾಣಿಜ್ಯ ಕಾಲೇಜು ಮತ್ತು ಎಸ್‌ಜೆಎಂವಿ ಮಹಿಳಾ ಕಾಲೇಜಿನಲ್ಲಿ ಹಾಸ್ಟೆಲ್‌ ಸೌಲಭ್ಯ ಇದ್ದು ಆಹಾರವನ್ನೂ ಒದಗಿಸಲಾಗುತ್ತದೆ.
ಜೆ.ಜಿ. ಕಾಲೇಜಿನಲ್ಲಿ ವಾರ್ಷಿಕ ₨ 17,000 ನೀಡಿದರೆ ಊಟ, ತಿಂಡಿ ಮತ್ತು ವಸತಿ ಲಭ್ಯ. ಪ್ರತಿ ಭಾನುವಾರ ಊಟದೊಂದಿಗೆ ಸಿಹಿ ವಿತರಿಸುತ್ತಿರುವುದು ಇಲ್ಲಿನ ವೈಶಿಷ್ಟ್ಯ. ಎಸ್‌ಜೆಎಂವಿ ಮಹಿಳಾ ಕಾಲೇಜಿನಲ್ಲಿ ಹಾಸ್ಟೆಲ್‌ಗೆ ವಾರ್ಷಿಕ ₨ 16,000 ತೆರಬೇಕು. ಆಹಾರಕ್ಕೆ ₨ 1,600 ಪ್ರತ್ಯೇಕವಾಗಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT