ಹುಬ್ಬಳ್ಳಿ: ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ವಿತರಿಸುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಹಳೇಗಬ್ಬೂರಿನ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ, ಕಸಬಾಠಾಣೆ ಪೊಲೀಸರು 18 ಮಂದಿ ಅಂಗನವಾಡಿ ಕಾರ್ಯಕರ್ತರು ಸೇರಿ 26 ಮಂದಿಯನ್ನು ಬಂಧಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಾದ ಶಮಿಮಾಬಾನು ಮುಜಾವರ, ಶಮಿಮಾಬಾನು ದಾರುಗಾರ, ಬೇಬಿಆಯಿಶಾ ಕಾರಿಗಾರ, ರೇಷ್ಮಾ ವಡ್ಡೊ, ಶಾಹೀನಾ ಚಕ್ಕೇಹಾರಿ, ಪೈರೋಜಾ ಮುಲ್ಲಾ, ಶಕುಂತಲಾ ನ್ಯಾಮತಿ, ಚಿತ್ರಾ ಉರಾಣಿಕರ ಸೇರಿದಂತೆ ಗೋದಾಮಿನ ಮಾಲೀಕ ಮೊಹ್ಮದ್ಗೌಸ್ ಖಲೀಪಾ, ಬಾಡಿಗೆದಾರ ಗೌತಮಸಿಂಗ್ ಠಾಕೂರ ಅವರನ್ನು ಬಂಧಿಸಿದ್ದಾರೆ.

ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋಧಿ, ರವಾಅಕ್ಕಿ, ಹಾಲಿನಪುಡಿ, ಬೆಲ್ಲ, ಉಪ್ಪಿಟ್ಟಿನ ಮಸಾಲಾ ಪುಡಿ, ಸಾಂಬಾರ ಮಸಾಲಾ ಪುಡಿ, ಸಕ್ಕರೆ, ಕಡ್ಲೆಬೆಳೆ, ಹೆಸರುಕಾಳು ಸೇರಿದಂತೆ 17 ಬಗೆಯ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

‘ಸರ್ಕಾರದಿಂದ ಉಚಿತವಾಗಿ ಪೂರೈಸುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿ, ಅಲ್ಲಿಂದ ಬೇರೆಡೆಗೆ ಸಾಗಾಟ ಮಾಡಲಾಗುತ್ತಿತ್ತು. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಕಮಲವ್ವ ಬೈಲೂರ ಅವರು ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದಾಗ ಪೌಷ್ಟಿಕ ಆಹಾರಗಳನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಬಗ್ಗೆ ಮಾಹಿತಿ ದೊರೆತಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಮಂಗಳವಾರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮಾಧ್ಯಮದವರಿಗೆ ತಿಳಿಸಿದರು.

‘₹4 ಲಕ್ಷ ಮೌಲ್ಯದ 329 ಚೀಲಗಳಲ್ಲಿರುವ 4.84 ಟನ್ ವಿವಿಧ ಬಗೆಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ಹಾಗೂ ₹3 ಲಕ್ಷ ಮೌಲ್ಯದ ಬುಲೆರೊ ವಾಹನ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲವು ಪ್ರಮುಖ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.