ಹುಬ್ಬಳ್ಳಿ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ, ಯುವತಿಯರ ಎದುರು ಫನ್ನಿ ನೃತ್ಯ ಮಾಡುತ್ತಿದ್ದ ನಗರದ ನವೀನ ಎಂಬಾತನನ್ನು ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದು, ಅವನಿಂದಲೇ ಜಾಗೃತಿ ಸಂದೇಶದ ವಿಡಿಯೊ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಯುವಕ ನವೀನ, ನಗರದ ದುರ್ಗದಬೈಲ್ ವೃತ್ತ ಹಾಗೂ ಇತರ ಮಾರುಕಟ್ಟೆ ಪ್ರದೇಶಗಳಲ್ಲಿ ಮಹಿಳೆಯರ ಎದುರು ಅಸಭ್ಯವಾಗಿ ವರ್ತಿಸುತ್ತ ನರ್ತಿಸುತ್ತಿದ್ದ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದನ್ನು ಆಧರಿಸಿ ಯುವಕನನ್ನು ಪತ್ತೆ ಹಚ್ಚಿದ ಪೊಲೀಸರು, ಠಾಣೆಗೆ ಕರೆತಂದು ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ದಾರೆ.

‘ಈ ಮೊದಲು ನಾನು ಸಾರ್ವಜನಿಕರ ಎದುರು ಫನ್ನಿ ನೃತ್ಯ ಮಾಡುತ್ತಿದ್ದೆ. ಹೀಗೆಲ್ಲ ಮಾಡುವುದು ತಪ್ಪು, ಇನ್ನುಮುಂದೆ ನಾನು ಹಾಗೆ ಮಾಡುವುದಿಲ್ಲ, ನೀವ್ಯಾರು ಸಹ ಹಾಗೆ ಮಾಡಬೇಡಿ’ ಎಂದು ಯುವಕನಿಂದಲೇ ವಿಡಿಯೊ ಮಾಡಿಸಿ, ಪೊಲೀಸ್ ಇಲಾಖೆಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.