ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಧಾರೆ ಎರೆಯುವ ಸವಾಲು ಸ್ವೀಕರಿಸಿ: ಡಾ. ಎಸ್. ಲೂಕಾಸ್

Last Updated 15 ಏಪ್ರಿಲ್ 2022, 2:46 IST
ಅಕ್ಷರ ಗಾತ್ರ

ಅಳ್ನಾವರ: ‘ಶಿಕ್ಷಣದಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ. ಇಂದಿನ ಮಕ್ಕಳು ಶಿಕ್ಷಣವನ್ನು ಸಮರ್ಥವಾಗಿ ಧಾರೆ ಎರೆಯುವ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿ ಕಠಿಣ ಅಧ್ಯಯನಕ್ಕೆ ಸಜ್ಜಾಗಬೇಕು’ ಎಂದು ಪ್ರಾಚಾರ್ಯ ಫಾದರ್ ಡಾ. ಎಸ್. ಲೂಕಾಸ್ ಹೇಳಿದರು.

ಇಲ್ಲಿನ ಸೇಂಟ್ ತೆರೇಸಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಪ್ರಥಮ ವರ್ಷದ ಬಿಇಡಿ ಪ್ರಶಿಕ್ಷಣಾರ್ಥಿಗಳ ಸ್ವಾಗತ ಹಾಗೂ ಪರಿಚಯ ಕಾರ್ಯಕ್ರಮದಲ್ಲಿ ಹೊಸಬರಿಗೆ ಪೆನ್ ನೀಡಿ ಮಾತನಾಡಿ ‘ನಮ್ಮ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಜನೆಗೆ ಬೇಕಾದ ಎಲ್ಲ ಸವಲತ್ತುಗಳು ಇವೆ. ಅದನ್ನು ಸರಿಯಾಗಿ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ’ ಎಂದರು.

ಶಿಕ್ಷಕ ಮಂಜುನಾಥ ಬೆಂಡಿಗೇರಿ, ಎಸ್.ಎ. ಹಡಪದ, ಬಿ.ಎಲ್. ದಾರ್ಲಾ, ವೀಣಾ ಧುಮೆ, ಪ್ರಕಾಶ ಬೀಡಿಕರ, ರಾಧಾ ಕಲಾಲ, ದೀಪಕ ಬರೆಟ್ಟೊ, ಲಕ್ಷ್ಮಣ ಕಿತ್ತೂರ, ಶ್ವೇತಾ ಹಿರೇಮಠ, ಫಾದರ ಕ್ಲೀಫರ್ಡ್‌, ಸುರೇಖಾ , ಜಾನ್ಸನ್ ಕರ್ಲೇಕರ ಇದ್ದರು. ಮೇಲಾನಿಕಾ, ಸಂತೋಷ ಕಡಪಟ್ಟಿ, ರಿಚರ್ಡ್‌ ಡಿಸೋಜಾ, ವಿನಾಯಕ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT