ಹುಬ್ಬಳ್ಳಿ: ‘ಜ್ಞಾನದ ಕಣಜವಾಗಿರುವ ಭಗವದ್ಗೀತೆಯನ್ನು ಶಾಲೆ, ಕಾಲೇಜುಗಳಲ್ಲಿ ಕಲಿಸುವ ವ್ಯವಸ್ಥೆ ಇಲ್ಲದಿರುವುದು ದುರದೃಷ್ಟಕರ. ಶಾಲಾ ಹಂತದಲ್ಲಿಯೇ ಗೀತೆಯ ಸಾರವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸವಾಗಬೇಕು’ ಎಂದು ಪ್ರಜಾಪಿತ ಬ್ರಹ್ಮಕುಮಾರಿಯ ಹುಬ್ಬಳ್ಳಿ ವಲಯದ ನಿರ್ದೇಶಕ ಬಸವರಾಜ ರಾಜಋಷಿ ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿರುವ ಭಗವದ್ಗೀತಾ ಜ್ಞಾನಲೋಕ ಆರ್ಟ್ ಗ್ಯಾಲರಿಯಲ್ಲಿ ಶನಿವಾರ ಏರ್ಪಡಿಸಿದ್ದ ಭಗವದ್ಗೀತಾ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಶ್ವ ಭ್ರಾತೃತ್ವ ಸಂದೇಶ, ನೈತಿಕ, ಮಾನವೀಯ, ಜೀವನ ಮೌಲ್ಯಗಳನ್ನು ಭಗವದ್ಗೀತೆ ನೀಡಿದೆ. ಇದು ಜ್ಞಾನದ ಕಣಜ’ ಎಂದರು.

ಆಧುನಿಕತೆಯ ಭರಾಟೆಯಲ್ಲಿ ದೇವರ ಮೇಲಿನ ವಿಶ್ವಾಸ, ಗುರು ಹಿರಿಯರಿಗೆ ಗೌರವ ಕೊಡುವುದನ್ನು ಯುವ ಪೀಳಿಗೆ ಮರೆತಿದೆ. ಭಗವದ್ಗೀತೆಯನ್ನು ಬೋಧಿಸದಿದ್ದರೆ ನವಭಾರತ ನಿರ್ಮಾಣ ಕಷ್ಟ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮದ ದುರುಪಯೋಗವಾಗುತ್ತಿದೆ. ಮನೆ ಮನಗಳಲ್ಲಿ ಗೀತೆಯ ಮೌಲ್ಯಗಳನ್ನು ಬಿತ್ತುವ ಕೆಲಸವಾಗಬೇಕು. ಹಿಂದೂಗಳ ಮನೆಯಲ್ಲಿ ಧರ್ಮದ ಅನುಷ್ಠಾನ ಆಗಬೇಕು ಎಂದರು.

ಕಾವ್ಯ ಚೂಡಾಮಣಿ ವೇಣೀಮಾಧವಶಾಸ್ತ್ರಿ ಬಿ.ಜೋಶಿ ಮಾತನಾಡಿ, ಕರ್ಮ, ಭಕ್ತಿ ಮತ್ತು ಜ್ಞಾನ ಮಾರ್ಗದ ಮೂಲಕ ಭಗವಂತನನ್ನು ಕಾಣಬಹುದು. ಶ್ರದ್ಧಾಭಕ್ತಿಯಿಂದ ನಡೆದುಕೊಂಡರೆ ದೇವರ ಅನುಗ್ರಹಕ್ಕೆ ಪಾತ್ರವಾಗಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಸಂದೇಶ ಪ್ರಸಾರ ಮಾಡಲಾಯಿತು. ‘ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತು ಇಂದಿಗೂ ಉತ್ತಮ ಜೀವನಕ್ಕೆ ದಾರಿದೀಪವಾಗಿವೆ. ಸನಾತನ ಹಿಂದೂ ಧರ್ಮಕ್ಕೆ ಭಗವದ್ಗೀತೆ ಆಧಾರವಾಗಿದೆ’ ಎಂದು ರಾಜ್ಯಪಾಲರು ಸಂದೇಶದಲ್ಲಿ ತಿಳಿಸಿದರು.

‘ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವೆ ಅನನ್ಯವಾದದ್ದು. ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಹೇಳಿದರು.

ಸ್ನೇಹಾ ಶಿಕಾರಿಪುರ ಮಾತನಾಡಿದರು. ಬ್ರಹ್ಮಕುಮಾರಿಯ ಹುಬ್ಬಳ್ಳಿ ವಲಯದ ಉಸ್ತುವಾರಿ ನಿರ್ಮಲಾ, ವಾಚಸ್ಪತಿ ಆರ್.ಜೋಶಿ, ಸೂರ್ಯನಾರಾಯಣ ಭಟ್, ಕಂಠಪಲ್ಲಿ ಸಮೀರಣಾಚಾರ್ಯ, ವೀಣಾ, ಜಯಂತಿ, ಲೀಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.