ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಕ್ತದಾನದಿಂದ ಆರೋಗ್ಯ ವೃದ್ಧಿ’

Published 10 ಮೇ 2024, 15:38 IST
Last Updated 10 ಮೇ 2024, 15:38 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ನಿಯಮಿತ ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಧಾರವಾಡ ರಕ್ತನಿಧಿ ಕೇಂದ್ರದ ಆರೋಗ್ಯಾಧಿಕಾರಿ ಎಂ.ಎಂ.ಹಿರೇಮಠ ಹೇಳಿದರು.

ಗ್ರಾಮದ ಮೂರುಸಾವಿರ ವಿರಕ್ತಮಠದಲ್ಲಿ ಶುಕ್ರವಾರ ಬಸವ ಜಯಂತಿ ಹಾಗೂ ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಪೀಠಾಧಿಪತಿ ಕುಮಾರ ವಿರೂಪಾಕ್ಷ ಸ್ವಾಮೀಜಿ ಅವರ 50ನೇ ಜನ್ಮದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಪ್ರಾಥಮಿಕ ಹಂತದ ಶಿಕ್ಷಣದ ಪಠ್ಯ ಪುಸ್ತಕದಲ್ಲಿ ರಕ್ತದಾನದ ಕುರಿತ ವಿಷಯ ಅಳವಡಿಸಿ ಜಾಗೃತಿ ಮೂಡಿಸಬೇಕು ಎಂದರು.

ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. 

ಶಿಬಿರದಲ್ಲಿ 45 ಜನರು ರಕ್ತದಾನ ಮಾಡಿದರು. ಖೇಡಗಿಯ ಪ್ರಭುದೇವರು, ರೋಹಿತ ಚವ್ಹಾಣ, ದತ್ತಾತ್ರೇಯ ವೈಕುಂಠೆ, ಮಹಾಂತೇಶ ಬೊಬ್ಬಿ, ಗಂಗಪ್ಪ ತಳವಾರ, ಮಡಿವಾಳಪ್ಪ ತಳವಾರ, ರಮೇಶ ಮಡಿವಾಳರ, ಅವಿನಾಶ ಮಸೂತಿ, ವರ್ಧಮಾನ ಅಷ್ಟಗಿ, ಸುಧಾಕರ ದೊಡಮನಿ, ಮಲ್ಲಿಕಾರ್ಜುನ ಯಮೋಜಿ, ಮಾಂತೇಶ ಚಿಕ್ಕಮಠ, ಮಂಜುನಾಥ ಬೆಳವಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT