ಕಲಘಟಗಿ: ಹಲವು ವರ್ಷಗಳಿಂದ ಸಮರ್ಪಕ ಬಸ್ ಸೌಲಭ್ಯವಿಲ್ಲದ ಬಸವರ್ಶಿಕೊಪ್ಪ, ಕಳಸನಕೊಪ್ಪ ಗ್ರಾಮಕ್ಕೆ ಬಸ್ ಸಂಚಾರ ಆರಂಭವಾಗಿದ್ದು, ಗ್ರಾಮಸ್ಥರು ಬಸ್ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡರು.

ತಾಲ್ಲೂಕಿನ ನೀರಸಾಗರ, ಬಸವರ್ಶಿಕೊಪ್ಪ, ಕನ್ನೇನಾಯಕನಕೊಪ್ಪ ಮತ್ತು ಕಳಸನಕೊಪ್ಪ ಗ್ರಾಮಕ್ಕೆ ಹುಬ್ಬಳ್ಳಿ ಹಾಗೂ ಕಲಘಟಗಿ ಮಾರ್ಗವಾಗಿ ಬಸ್ ಸೌಕರ್ಯವಿಲ್ಲದೆ ಸಮಸ್ಯೆ ಉಂಟಾಗಿತ್ತು. ಈ ತೊಂದರೆ ನಿವಾರಿಸಲು ಸಚಿವ ಸಂತೋಷ ಲಾಡ್ ಅವರು ಸೂಚಿಸಿದ್ದರು.

ಬಸವರ್ಶಿಕೊಪ್ಪ ಗ್ರಾಮಕ್ಕೆ ಬಂದ ಬಸ್ ಅನ್ನು ತೋರಣಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿ ಆರತಿ ಬೆಳಗಲಾಯಿತು. ಸಚಿವರ ಆಪ್ತ ಕಾರ್ಯದರ್ಶಿ ಸೋಮಶೇಖರ ಬೆನ್ನೂರ ಹಾಗೂ ಬಸ್ ಚಾಲಕರನ್ನು ಸನ್ಮಾನಿಸಲಾಯಿತು.

ಗ್ರಾಮದ ಚಂದ್ರಮನಿ ದಾದಾಗೌಡ, ಅರ್ಜುನ ಅಂಗಡಿ, ಚನ್ನಬಸಯ್ಯ ಹುಬ್ಬಳ್ಳಿಮಠ, ಚಂದ್ರಶೇಖರ ಹಡಪದ, ಅಶೋಕ ಉಣಕಲ್ಲ, ಯಲ್ಲಪ್ಪ ಶಿರಗುಪ್ಪ, ಅಜ್ಜಪ್ಪ ವಾಲಿಕಾರ, ಬಸವರಾಜ ಗೌರಿ, ಸುರೇಶ ದೊಡ್ಡಮನಿ, ಲಿಂಗನಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.