ಧಾರವಾಡ: ತಾಲ್ಲೂಕಿನ ತೆಗೂರು ಸಮೀಪ ಮುಲ್ಲಾಲ್ ಡಾಬಾ ಬಳಿ ಕಾರು ಉರುಳಿ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ತಡರಾತ್ರಿ ಸಂಭವಿಸಿದೆ.
ಧಾರವಾಡದ ಸಿ.ಬಿ.ನಗರದ ವಿನಯ್ ದೊಡ್ಡ ವೀರಯ್ಯ ಹಿರೇಮಠ (35) ಹಾಗೂ ಸಂದೀಪ್ ಕುರುವತ್ತಪ್ಪ ಸಾರಥಿ (34) ಮೃತಪಟ್ಟವರು.
'ಕಾರು ಬೆಳಗಾವಿಯಿಂದ ಧಾರವಾಡ ಕಡೆಗೆ ಸಾಗುವಾಗ ಸ್ಕಿಡ್ ಆಗಿ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಕಿರಣ್ ಎಂಬಾತ ಪರಾರಿಯಾಗಿದ್ದಾರೆ' ಎಂದು ಗರಗ ಠಾಣೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.