ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ‘ಸಾಲಿಗುಡಿ’ ಪತ್ರಿಕೆ ಓದುತ್ತಿರುವುದು
ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ‘ಸಾಲಿಗುಡಿ’ ಪತ್ರಿಕೆ ಓದುತ್ತಿರುವುದು
‘ಸಾಲಿಗುಡಿ’ ಪತ್ರಿಕೆಯೊಂದಿಗೆ ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ– ವಿದ್ಯಾರ್ಥಿನಿಯರು

ಸರ್ಕಾರಿ ಶಾಲೆಯ ಮಕ್ಕಳು ಒಂದು ಪತ್ರಿಕೆ ತರುತ್ತಿರುವುದೇ ಹೆಮ್ಮೆಯ ಸಂಗತಿ. ಲಿಂಗರಾಜ ರಾಮಾಪುರ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ
ಉಮೇಶ ಬೊಮ್ಮಕ್ಕನವರ ಬಿಇಒ ಹುಬ್ಬಳ್ಳಿ ಗ್ರಾಮೀಣ
ಪತ್ರಿಕೆಯಿಂದಾಗಿ ಮಕ್ಕಳು ಬರೆಯುವ ಉತ್ಸಾಹ ತೋರುತ್ತಿದ್ದಾರೆ. ಪೋಷಕರು ಗಣ್ಯರ ಪ್ರೋತ್ಸಾಹ ಇರುವುದರಿಂದಲೇ ಇಂಥ ಸೃಜನಾತ್ಮಕ ಚಟುವಟಿಕೆ ಯಶಸ್ವಿಯಾಗಿ ನಡೆಯುತ್ತಿದೆ
ಸುಮನ್ ತೇಲಂಗ ಮುಖ್ಯ ಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ಕಿರೇಸೂರುಕವನ ಪ್ರಕಟ
ನಾನು ಬರೆದ ಕವನಗಳು ‘ಸಾಲಿಗುಡಿ’ ಪತ್ರಿಕೆಯಲ್ಲಿ ಪ್ರಕಟವಾದಾಗ ತುಂಬಾ ಖುಷಿಯಾಯಿತು. ನಮ್ಮ ಊರಿನ ವಿಶೇಷ ಕಾರ್ಯಕ್ರಮಗಳ ವರದಿ ಸಾಧಕ ವ್ಯಕ್ತಿಗಳ ಬಗ್ಗೆ ಇದರಿಂದ ತಿಳಿದುಕೊಂಡಿದ್ದೇವೆ. ಪತ್ರಿಕೆ ಸಂಪಾದನೆಯನ್ನೂ ಕಲಿತಿದ್ದೇವೆ.–ಚೇತನ್ ಬಡಿಗೇರ 10ನೇ ತರಗತಿ
ಹಲವು ಮಾಹಿತಿ ಲಭ್ಯ
ಈ ಪತ್ರಿಕೆಯಿಂದ ಓದುವ ಬರೆಯುವ ಹವ್ಯಾಸ ಬೆಳೆದಿದೆ. ನಮ್ಮ ಲೇಖನಗಳು ಪ್ರಕಟವಾದಾಗ ಬಹಳ ಸಂತೋಷವಾಗುತ್ತದೆ. ಹಲವು ವಿಷಯಗಳ ಬಗ್ಗೆ ಮಾಹಿತಿ ಸಿಗುತ್ತಿದೆ.–ಪ್ರತಿಮಾ ಗುಳಗಂದಿ 10ನೇ ತರಗತಿ