ಶನಿವಾರ, ಜನವರಿ 25, 2020
19 °C

ಮದುವೆಯಾದ ಎರಡೇ ದಿನಕ್ಕೆ ವಿಕೃತಿ: ಸ್ನೇಹಿತನಿಗೆ ಸಹಕರಿಸೆಂದ ಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮದುವೆಯಾದ ಎರಡೇ ದಿನಕ್ಕೆ ವಿಕೃತ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಸ್ನೇಹಿತನೊಂದಿಗೆ ಸಹಕರಿಸುವಂತೆ ಬೆದರಿಸಿ, ಮಾನಸಿಕ ಕಿರುಕುಳ ನೀಡಿರುವ ಕುರಿತು ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ.

ಗಣೇಶಪೇಟೆ ನಿವಾಸಿ ಮುಸ್ತಾಕ್‌ ಕಾಟೇವಾಡಿ ವಿರುದ್ಧ ಆತನ ಪತ್ನಿಯೇ ದೂರು ದಾಖಲಿಸಿದ್ದಾರೆ. ‘2019ರ ಜುಲೈನಲ್ಲಿ ಮುಸ್ತಾಕ್‌ ಜೊತೆ ಮದುವೆ ಆಗಿತ್ತು. ಎರಡು ದಿನ ಚೆನ್ನಾಗಿ ನೋಡಿಕೊಂಡಿದ್ದನು. ನಂತರ ಸ್ನೇಹಿತನನ್ನು ಮನೆಗೆ ಕರೆದುಕೊಂಡು ಬಂದು, ಅವನ ಜೊತೆ ಸಹಕರಿಸಲು ಪೀಡಿಸಿದನು’ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

‘ಈ ಮಾತನ್ನು ಒಪ್ಪದಿದ್ದಾಗ, ಮಹಿಳಾ ಸಂಘದಲ್ಲಿ ಮಾಡಿರುವ ₹5 ಲಕ್ಷ ಸಾಲ ನೀನೇ ತಿರಿಸು, ಇಲ್ಲ ಸ್ನೇಹಿತನ ಜೊತೆ ಸಹಕರಿಸು ಎಂದು ಹಿಂಸೆ ನೀಡಿದ್ದನು. ಮಾತು ಕೇಳದಿದ್ದರೆ ಬೆಡ್‌ ರೂಮ್‌ಲ್ಲಿ ಸಿಸಿಟಿವಿ ಕ್ಯಾಮೆರಾ ಇಟ್ಟು ಎಲ್ಲರಿಗೂ ವಿಡಿಯೋ ಕಳುಹಿಸುತ್ತೇನೆ ಎಂದು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದನು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು