ಹುಬ್ಬಳ್ಳಿ: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ಸೆಪ್ಟೆಂಬರ್ 7ರಂದು ‘ಕರುನಾಡ ಸವಿಯೂಟ’ ಸ್ಪರ್ಧೆ ನಡೆಯಲಿದೆ.

ಗೆಳೆಯರು, ಕುಟುಂಬ ಸದಸ್ಯರೊಂದಿಗೆ ಆಸಕ್ತರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಅಡುಗೆ ಕೌಶಲದಿಂದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ, ಆಕರ್ಷಕ ಬಹುಮಾನ ಗೆಲ್ಲಬಹುದು. ‘ಸುಧಾ’ ವಾರಪತ್ರಿಕೆಯಲ್ಲೂ ಕಾಣಿಸಿಕೊಳ್ಳಬಹುದು.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿರಬೇಕು. ಬಗೆಬಗೆಯ ತಿಂಡಿ, ತಿನಿಸುಗಳನ್ನು ಸಿದ್ಧಪಡಿಸಿಕೊಂಡು ತೀರ್ಪುಗಾರರ ಮನ ಗೆಲ್ಲಬಹುದು. ರುಚಿಕಟ್ಟಾದ ಮತ್ತು ಹೊಸ ವಿನ್ಯಾಸದೊಂದಿಗೆ ಪದಾರ್ಥಗಳನ್ನು ಆಕರ್ಷಣೀಯ ಮಾಡಬಹುದು.

ಇಂಡೇನ್ (ಎಲ್ಪಿಜಿ ಪಾರ್ಟನರ್), ಟಿಟಿಕೆ ಪ್ರೆಸ್ಟಿಜ್ (ಕಿಚನ್ ಪಾರ್ಟನರ್), ಭೀಮಾ ಜೂವೆಲರ್ಸ್ (ಸ್ಪೆಷಲ್ ಪಾರ್ಟನರ್), ಲೇಸ್ (ಸ್ನ್ಯಾಕ್ಸ್ ಪಾರ್ಟನರ್), ಎಸ್ಬಿಐ ಕಾರ್ಡ್, ವೆನ್ಕಾಬ್ ಚಿಕನ್, ಎಕೊ ಕ್ರಿಸ್ಟಲ್ ವಾಟರ್, ಯುಕೆ ಬಿಲ್ಡರ್ (ಸಹ ಪ್ರಾಯೋಜಕರು) ಸಂಸ್ಥೆಗಳ ಸಹಭಾಗಿತ್ವವಿದೆ.

‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮದ ಖ್ಯಾತಿಯ ಮುರಳಿ ಅವರನ್ನು ನೇರವಾಗಿ ಭೇಟಿ ಆಗಬಹುದು. ಅವರೊಂದಿಗೆ ಸಂವಾದಿಸಬಹುದು. ಹೊಸ ಬಗೆಯ ತಿಂಡಿ, ತಿನಿಸುಗಳ ಬಗ್ಗೆ ತಿಳಿಯಬಹುದು. ಅವರೇ ಸ್ಪರ್ಧೆಯಲ್ಲಿ ಆಹಾರ ಪದಾರ್ಥಗಳನ್ನು ಸವಿದು, ತೀರ್ಪನ್ನೂ ನೀಡುತ್ತಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಇಲ್ಲಿ ಇರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ, ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9902574528

ನಿಯಮಗಳು

* ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥದೊಂದಿಗೆ ಬೆಳಿಗ್ಗೆ 9ರೊಳಗೆ ಹಾಜರು ಇರಬೇಕು.

* ಅಡುಗೆ ಪದಾರ್ಥವು ಕರ್ನಾಟಕದ ಖಾದ್ಯ ಆಗಿರಬೇಕು.

* ಆಹಾರದ ಹೊಸತನ, ರುಚಿ ಮತ್ತು ಮಾನದಂಡ ಆಧರಿಸಿ ತೀರ್ಪು ನೀಡಲಾಗುತ್ತದೆ.

* ತಟ್ಟೆ, ಪರಿಕರ ಮತ್ತು ಖಾದ್ಯಾಲಂಕಾರ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.