ಪ್ರಕರಣ ದಾಖಲಿಸಿ: ಜಿಲ್ಲಾಧಿಕಾರಿ
‘ಎಲ್ಲ ಜಿಲ್ಲೆಗಳ ರೈತರಿಗೂ ವಿಮೆ ಹಣ ಬಂದಿತ್ತು. ತಾಂತ್ರಿಕ ಕಾರಣದಿಂದಾಗಿ ನಮ್ಮ ಜಿಲ್ಲೆಗೆ ಬಂದಿರಲಿಲ್ಲ. ಮೂರು–ನಾಲ್ಕು ತಿಂಗಳಿನ ನಿರಂತರ ಪ್ರಯತ್ನದಿಂದ ಇದೀಗ ₹30 ಕೋಟಿ ಹಣ ಬಿಡುಗಡೆಯಾಗುವ ಮಾಹಿತಿ ಸಿಕ್ಕಿದೆ. ಮಧ್ಯವರ್ತಿಗಗಳ ಹಾವಳಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ನನಗೆ ಅಥವಾ ಪೊಲೀಸರಿಗೆ ದೂರು ನೀಡಬೇಕು. ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಭರವಸೆ ನೀಡಿದರು.