ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನವಲಗುಂದ: ಆರೋಗ್ಯ ಇಲಾಖೆಯಿಂದ ಲಾರ್ವಾ ಸಮೀಕ್ಷೆ, ಡೆಂಗಿ ಜಾಗೃತಿ

Published 22 ಜೂನ್ 2024, 15:39 IST
Last Updated 22 ಜೂನ್ 2024, 15:39 IST
ಅಕ್ಷರ ಗಾತ್ರ

ನವಲಗುಂದ: ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮನೆ ಮನೆಗೆ ತರಳಿ ಲಾರ್ವಾ ಸಮೀಕ್ಷೆ ನಡೆಸುವ ಜತೆಗೆ ಡೆಂಗಿ ಕುರಿತು ಜಾಗೃತಿ ಮೂಡಿಸಿದರು.  

ಮನೆಯಲ್ಲಿ ಡ್ರಮ್‌, ಇತರ ವಸ್ತುಗಳಲ್ಲಿ ಬಹಳ ದಿನಗಳಿಂದ ಸಂಗ್ರಹಿಸಿದ ನೀರನ್ನು ಹೊರಗೆ ಚೆಲ್ಲಿಸಿದರು.

ತೆಂಗಿನ ಚಿಪ್ಪು, ಟೈರ್‌, ಸಿಮೆಂಟ್‌ ತೊಟ್ಟಿ ಒಡೆದ ಬಕೆಟ್‌, ಕೊಡಗಳಲ್ಲಿ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಜ್ವರ ಬಂದರೆ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ತಾಲ್ಲೂಕು ಅರೋಗ್ಯಾಧಿಕಾರಿ ಡಾ.ಎನ್.ಬಿ.ಕರ್ಲವಾಡ, ಡಾ.ಅವಿನಾಶ ಎಸ್.ಜಿ., ರಮೇಶ್ ಹುಬ್ಬಳ್ಳಿ, ಸುಭಾಸ್ ಮಂಗಳಿ, ಶರಣಪ್ಪ ಕಡ್ಲೆಬಿಷ್ಠಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT