ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲ ಯೋಜನೆಯಿಂದ ಸರ್ವರ ಅಭಿವೃದ್ಧಿ- ಹಿರಿಯ ಉಪನ್ಯಾಸಕ ಎಸ್.ಬಿ. ಪಾಟೀಲ

Last Updated 21 ಡಿಸೆಂಬರ್ 2021, 14:38 IST
ಅಕ್ಷರ ಗಾತ್ರ

ಅಳ್ನಾವರ: ಸಕಾಲ ಸರ್ಕಾರ ಜಾರಿ ಮಾಡಿದ ಮಹತ್ವಪೂರ್ಣ ಯೋಜನೆಯಾಗಿದ್ದು, ಇದರಿಂದ ಸರ್ವರ ಏಳಿಗೆಯಾಗುತ್ತದೆ ಎಂದು ವಾಣಿಜ್ಯಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ಎಸ್.ಬಿ. ಪಾಟೀಲ ಹೇಳಿದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ವಿಭಾಗದ ಆಶ್ರಯದಲ್ಲಿ ಮಂಗಳವಾರ ನಡೆದ ಸಕಾಲ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ‘ಈ ಯೋಜನೆಯನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಮಹತ್ವ ತಿಳಿಯಬೇಕು’ ಎಂದರು.

ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುರೇಶ ದೊಡ್ಡಮನಿ ಮಾತನಾಡಿ ‘ಸಕಾಲ ಯೋಜನೆಯನ್ನು ಸರಿಯಾಗಿ ಅರಿತುಕೊಂಡರೆ ಹಲವಾರು ಯೋಜನೆಗಳ ಅನುಕೂಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು’ ಎಂದರು.

ಅನುಪಮ ಢವಳೆ ಅಧ್ಯಕ್ಷತೆ ವಹಿಸಿದ್ದರು. ಪಿ.ಬಿ. ಚಾರಿ, ಮಹಮ್ಮದ ಶಫಿ ವಡ್ಡೊ, ಸಿದ್ದೇಶ್ವರ ಕಣಬರ್ಗಿ, ಅಶ್ವಿನಿ ನಿಪ್ಪಾಣೆ, ಶಿರೀನಬಾನು ಹಿರೇಕುಂಬಿ, ಡಾ. ಎಸ್.ಎಂ. ಕಳಸಗೇರಿ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT